342 ಕವಲೊಡೆದ ಬದುಕು

#ಕವನಸ್ಪರ್ಧೆ

#ಕವಲೊಡೆದ_ಬದುಕು

ಬದುಕು ಇತ್ತಂದು ಸುಮಧುರ ಸುಂದರ
ಪ್ರೀತಿಪ್ರೇಮಗಳ ಬಾಂಧವ್ಯದ ಹಂದರ
ಅದೆಲ್ಲಿ ಮೂಡಿತೋ ದಾಂಪತ್ಯದಲ್ಲಿ ಒಡಕು
ಅಂದಿನಿಂದಾಯ್ತು ನಮ್ಮದು ಕವಲೊಡೆದ ಬದುಕು..!

ಅರೆಕ್ಷಣವೂ ಬಿಟ್ಟಿರಲಾರದಂತ ಪ್ರೇಮ ಬಂಧ
ನಮ್ಮಿಬ್ಬರ ನಡುವಲ್ಲಿತ್ತಂದು ಅದೆಂಥ ಚಂದ..!
ಬೀಸಿತ್ತೆಲ್ಲಿಂದಲೋ ರಕ್ಕಸ ಬಿರುಗಾಳಿ
ಬದುಕಿನ ಆಸೆಗಳಾಯ್ತಿಂದು ಚಲ್ಲಾಪಿಲ್ಲಿ

ನಮ್ಮ ಭಾವಗಳ ಬೆಸೆದಿತ್ತು ಅದಮ್ಯ ಪ್ರೀತಿ
ಎಂದಿಗೂ ಕಂಡಿರಲಿಲ್ಲ ಬೇರಾಗುವ ಭೀತಿ..!
ಹರುಷದ ಹೊನಲಲ್ಲಿ ತೇಲುತ್ತಿತ್ತು ಬದುಕು
ಆದರ್ಹೇಗಾಯ್ತಿಂದು ಬದುಕಲ್ಲಿ ಬಿರುಕು..!

ಅಂದುಕೊಂಡಂತೆಯೇ ನಡೆಯದು ಜೀವನ
ಜೀವನವಿದು ನೋವು ನಲಿವಿನ ಸಮ್ಮಿಲನ..!
ಇಂದು ನನ್ನದಾಗಿದೆ ಕವಲೊಡೆದ ಬದುಕು
ನಾಳೆ ಕಾಣಬಹುದು ಬದುಕು ಬೆಳಗುವ ಬೆಳಕು..!

            ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ