340 ನಗುತ ನಗುತ ಬಾರೋ

ನಗುತ ನಗುತ ಬಾರೋ ಬೇಗಾ
ಎನ್ನ ಮನದ ಗುಡಿಗೆ ಈಗ
ನಗುತ ನಗುತ ಬಾರೋ ಬೇಗಾ........

ಯಮುನಾ ನದಿಯ ತೀರದಲ್ಲಿ
ಹಾಲು ತುಂಬಿ ಕೊಡಗಳಲ್ಲಿ
ಕಾದಿಹಳೂ  ರಾಧೇಯಿಲ್ಲಿ
ಬಾರೋ ಬೇಗ  ನಗುವ ಚೆಲ್ಲಿ

ಮೂಡಿ  ಮಂದಹಾಸ  ಮನದಿ
ಬರುವಿಗಾಗೇ ಕಾದೆ ಮುದದಿ
ಇರಲು ಸದಾ ನಿನ್ನ ಸನ್ನಿಧಿ
ಸುಖಿಯು ಬಹಳ ನಾನು  ಜಗದಿ

ಮುರಳಿ ಲೋಲ ನಗುತ ಬಾರೋ
ಎನ್ನ ಮೇಲೆ ಕರುಣೆ ತೋರೋ
ಕಾದು ಕುಳಿತ ಪ್ರಕೃತಿ ಯೆಡೆಗೆ
ಪರಮ ಪುರುಷ ದಯದಿ  ಬಾರೋ...

                   ಶೈಲೂ........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ