338 ಹುಸಿನಗೆಯ ಬೀರಿ

ಕಣ್ರೆಪ್ಪೆ  ಹಾಕದಲೇ
ಹುಸಿ ನಗೆಯ ಬೀರಿ
ಕುಡಿನೋಟದಿಂದೆನ್ನ
ನೋಡದಿರು ಕೃಷ್ಣಾ
ನಾಚಿ ನೀರಾಗಿದ್ದೇನೆ ನಾನು
ಬೇಡಬೇಡ ವೆಂದರೂ ಎನ್ನಂತರಂಗದ  ಭಾವನೆಗಳು
ಉಕ್ಕುಕ್ಕಿ ಬರುತ್ತಿವೆ
ಹೇಳಲಾರೆ ನಾ 
ಮನದ ಮಾತುಗಳ...
ಅಂತರಾತ್ಮ ನೀನು
ಎನ್ನಂತರಂಗವನರಿತಿದ್ದರೂ
ಈ  ಪರಿ ಕಾಡುವೆಯೇಕೆ
ನಿನ್ನೀ  ನೋಟದಾ ಸೆಳೆತ
ಮರೆಸುತ್ತಿದೆ ಎಲ್ಲ
ಮಾಯಾವಿ  ನೀನು
ಜಗತ್ತನ್ನೆಲ್ಲನಿನ್ನಲ್ಲಡಗಿಸಿಕೊಂಡು
ಸೃಷ್ಟಿಸಿದ್ದೀಯ  ಏಕಾಂತ
ಬೆರೆಸಲಾರೆ ನೋಟಕ್ಕೆ ನೋಟ
ಕರಗಿ ಹೋಗಿದ್ದೇನೆ
ಲೀನವಾಗಿದ್ದೇನೆ ನಿನ್ನಲ್ಲೇ ನಾನು........

                           ಶೈಲೂ...........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ