321 ರುಬಾಯಿ

#ರುಬಾಯಿ

#ಚೈತ್ರದ_ಚಿಗುರು

1). 
ಎತ್ತಣ ಮಾಮರ ಎತ್ತಣ ಕೋಗಿಲೆ
ಎತ್ತಣಿ0ದೆತ್ತ ಸಂಬಂಧ ಕೋಕಿಲ ಹೇಳೆಲೆ
ಚೈತ್ರದ ಚಿಗುರು ತಂದಿದೆ ಮನಕಾನಂದ
ಕೊರಳೆತ್ತಿ ಇಂಪಾಗಿ ಕುಹೂ ಕುಹೂ ಹಾಡೆಲೆ

2).
ನಿಸರ್ಗದ ಬದಲಾವಣೆ ತಂದಿದೆ ಹರುಷ
ಋತುಮಾನದ ಚಿತಾವಣೆಯಿದು ಪ್ರತಿ ನಿಮಿಷ
ಈ ಚೈತ್ರ ತಂದ ಚಿಗುರಲೆನೋ ಸಂಭ್ರಮ
ಕೈಬೀಸಿ ಕರೆತಂದಿದೆ ಸಡಗರದ ನವ ವರುಷ

    ಶೈಲಜಾ ರಮೇಶ್

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ