270 ರೂಪಾಂತರ

#ರೂಪಾಂತರ
***********

ಜೀವನದ ಕ್ಷಣಕ್ಷಣದೇ
ಪ್ರತ್ಯಕ್ಷವಾಗಿಯೋ
ಪರೋಕ್ಷವಾಗಿಯೋ
ಆಗುವ ಭೌತಿಕ, ಆಧ್ಯಾತ್ಮಿಕ
ಲೌಕಿಕ, ಮಾನಸಿಕ ತುಮುಲ
ಅನುಭವ ಅನಿಸಿಕೆಗಳ
ರಸಾನುಭವವು  ಅಗಣಿತ 
ಅವುಗಳ ಯಥಾವತ್
ನಿರೂಪಣೆಯೇ... #ವರದಿ* ..!
ಬಿಡಿಸಿ.. ವಿಶ್ಲೇಷಿಸಿ.. ಅವಲೋಕಿಸಿ..
ವೈಜ್ಞಾನಿಕತೆಯಡಿಯಲ್ಲಿ
ಬಿಚ್ಚಿಟ್ಟರದು...  #ಶಾಸ್ತ್ರ..!
ಅವುಗಳೆಲ್ಲವನ್ನೂ ಅಂತರ್ಗತಗೊಳಿಸಿ
ಭಾವಿಸಿ..ಅನುಭವಿಸಿ..
ಪದಾಲಂಕಾರದಿ ಅಲಂಕರಿಸಿ
ಬಣ್ಣನೆಯ ನುಡಿಗಟ್ಟಿನ
ಚೌಕಟ್ಟಿನಲ್ಲಿಟ್ಟರದುವೇ... #ಕಾವ್ಯ..!*

           ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ