269 ಮತ್ತೆ ಭೇಟಿ ಆಗೋಣ

ಮತ್ತೆ ಭೇಟಿ ಆಗೋಣ
******************

ಕಾಯುತ್ತಿದ್ದೆ ಅಂದು ನಿನ್ನ
ಭೇಟಿಯಾಗುವ ದಿನಕೆ
ಬಂದೇ ಬರುವೆಯೆಂದು
ನೀ ಹೇಳುತ್ತಿದ್ದೇ ನೆಪಕೆ

ನೀನೆಲ್ಲೋ ನಾನೆಲ್ಲೂ ಆದರೂ
ಮನದ ಭಾವ ಸಾರ ಒಂದೇ
ನೀ ಎಳೆದಿದ್ದೆ ಎನ್ನ ಮನಸ
ತುಂಬಿ ನವ ರಾಗ.ಮನದೆ

ಕನಸ ಬಿತ್ತಿದ್ದ ಮನಸನ್ನೊಮ್ಮೆ
ನೋಡುವ ಅದಮ್ಯ ಬಯಕೆ
ಆದರೇಕೆ ಬಾರದೆ ಹೋದೆ ನೀ
ಬರೆಯೆಳೆದುಬಿಟ್ಟೆ ತುಡಿವ ಮನಕೆ

ಗೊತ್ತುಗಿರಿಯಿರದ ಪಯಣದಲ್ಲಿ
ದಿನವೂ ಅದೆಷ್ಟೋ ಜನರ ಭೇಟಿ
ಬಂದು ಹೋಗುವ ಬಂಧಗಳಲಿ
ನಿನ್ನ ಕಾಣುವ ಬಯಕೆಯೇ ಮೇಟಿ

ಕಾಯಿಸದರು ಮಿಡಿವ  ಮನವ
ನೀನಿಲ್ಲದೇ ನೀರಸವೀ ಪ್ರಯಾಣ
ತುಂಬಲು ಈ ಬದುಕಿಗೆ ಸಂಭ್ರಮ
ಮರೆಯದೇ ಮತ್ತೆ ಭೇಟಿ ಅಗೋಣ

         ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ