268 ಮನೆಯೇ ನಂದನ

ಮನೆಯೇ ನಂದನ
****************

ಸಹಜತೆಯ ಪ್ರೀತಿಯಲಿ
ಅರಳಿರುವ  ಮೊಗವಿರಲಿ
ಪ್ರೀತ್ಯಾಧರಗಳು ಚಿಮ್ಮುತ್ತಿರಲಿ
ಅನುದಿನವೂ ನಗುತಿರಲು
ಜೀವನವು  ರಸಹೊನಲು
ಆ ಮನೆಯೇ ನಂದನ..!!

ಗುಡಿಗಿಟ್ಟ ಕಲಶದೊಲು
ಬೆಳಕೀವ ದೀಪದೊಲು
ಚೈತನ್ಯ ದ  ಹಸಿರಿನೊಲು
ಪರಿಮಳದ ಕುಸುಮದೊಲು
ಹೆಣ್ಣೊಂದು ನಗುತಿರಲು
ಆ  ಮನೆಯೇ ನಂದನ..!!

ನೋವಿರಲಿ ನಲಿವಿರಲಿ
ಬಾಂಧವ್ಯ ಕುಸಿಯದಿರಲಿ
ಸಿಹಿಜೇನ ಮಾತಿನಲಿ
ವಾತ್ಸಲ್ಯ ತುಂಬಿರಲಿ
ಮನ - ಹೃದಯ ಬೆರೆತಿರಲು
ಆ ಮನೆಯೇ ನಂದನ..!!

ದೇವನಲಿ ಮನ ಬೆರೆಸಿ
ಹಿರಿಯರಲಿ ಶಿರ ಮಣಿಸಿ
ಕಿರಿಯರನು ಅಪ್ಪಿ ಹರಸಿ
ನಡೆಯಿರಲಿ ಸ್ನೇಹ ನೆನೆಸಿ
ನಗುತಿರಲು  ಅನುದಿನ
ಆ ಮನೆಯೇ ನಂದನ..!!

ಸ್ತ್ರೀ ಗಿರಲು ಗೌರವಾದರ
ಆ ಮನೆಗಿಹುದು  ದೈವದಾದರ
ಎಲ್ಲಿ ನಗುವಳೋ  ಹೆಣ್ಣು
ಆ ಮನೆಯಲಿಹುದು ಹೊನ್ನು
ಹೆಣ್ಣಾದರೆ ಮನೆಯ ಕಣ್ಣು
ಆ ಮನೆಯೇ ನಂದನ
ಚಂದದ  ವೃಂದಾವನ...

            ಶೈಲೂ.....

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ