Posts

Showing posts from June, 2020

272 ಮುನಿಸು

Image

271ಅವರವರ ಭಾವಕ್ಕೆ

Image

271 ಇದಕಿದೆಯೇ ಮದ್ದು?

ಇದಕಿದೆಯೇ  ಮದ್ದು..?? ********************** ಅನುಮಾನ.... ಇದೊಂದು ಭಯಾನಕ ರೋಗ..  ಇದಕಿದೆಯೇ ಮದ್ದು.. ಪ್ರತ್ಯಕ್ಷ ಕಂಡರೂ  ಪ್ರಮಾಣಿಸಿ ನೋಡದ ಕಪೋಲಕಲ್ಪಿತ ನಡೆಗಿದೆಯೇ ಮದ್ದು.. ಹಿತ್ತಾಳೆ ಕಿವಿಯ   ಬಲೆಗೆ ಬಿದ್ದು ಹೀಯಾಳಿಕೆಗೆ ನಲುಗಿ  ಮುರಿದ ಮನಕಿದೆಯೇ ಮದ್ದು.. ಊಹೆಯ ಜಾಡಿನಲಿ  ಮಾಯೆಯ ತೆರೆಯೆಳೆದು ಬೇಸರದ ವಿಷಯಾರೋಪಕಿದೆಯೇ ಮದ್ದು.. ಬತ್ತಿದ ಚಿತ್ತ ವಿಕಾರಕೆ   ನೋವುಂಡ ಮನದಾಳಕೆ ಅರ್ಥವಿಲ್ಲದ ಒಣಪ್ರತಿಷ್ಠೆ ಗಿದೆಯೇ  ಮದ್ದು..            ಶೈಲೂ.....

270 ರೂಪಾಂತರ

#ರೂಪಾಂತರ *********** ಜೀವನದ ಕ್ಷಣಕ್ಷಣದೇ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆಗುವ ಭೌತಿಕ, ಆಧ್ಯಾತ್ಮಿಕ ಲೌಕಿಕ, ಮಾನಸಿಕ ತುಮುಲ ಅನುಭವ ಅನಿಸಿಕೆಗಳ ರಸಾನುಭವವು  ಅಗಣಿತ  ಅವುಗಳ ಯಥಾವತ್ ನಿರೂಪಣೆಯೇ... #ವರದಿ* ..! ಬಿಡಿಸಿ.. ವಿಶ್ಲೇಷಿಸಿ.. ಅವಲೋಕಿಸಿ.. ವೈಜ್ಞಾನಿಕತೆಯಡಿಯಲ್ಲಿ ಬಿಚ್ಚಿಟ್ಟರದು...  #ಶಾಸ್ತ್ರ..! ಅವುಗಳೆಲ್ಲವನ್ನೂ ಅಂತರ್ಗತಗೊಳಿಸಿ ಭಾವಿಸಿ..ಅನುಭವಿಸಿ.. ಪದಾಲಂಕಾರದಿ ಅಲಂಕರಿಸಿ ಬಣ್ಣನೆಯ ನುಡಿಗಟ್ಟಿನ ಚೌಕಟ್ಟಿನಲ್ಲಿಟ್ಟರದುವೇ... #ಕಾವ್ಯ..!*            ಶೈಲೂ......

269 ಮತ್ತೆ ಭೇಟಿ ಆಗೋಣ

Image
ಮತ್ತೆ ಭೇಟಿ ಆಗೋಣ ****************** ಕಾಯುತ್ತಿದ್ದೆ ಅಂದು ನಿನ್ನ ಭೇಟಿಯಾಗುವ ದಿನಕೆ ಬಂದೇ ಬರುವೆಯೆಂದು ನೀ ಹೇಳುತ್ತಿದ್ದೇ ನೆಪಕೆ ನೀನೆಲ್ಲೋ ನಾನೆಲ್ಲೂ ಆದರೂ ಮನದ ಭಾವ ಸಾರ ಒಂದೇ ನೀ ಎಳೆದಿದ್ದೆ ಎನ್ನ ಮನಸ ತುಂಬಿ ನವ ರಾಗ.ಮನದೆ ಕನಸ ಬಿತ್ತಿದ್ದ ಮನಸನ್ನೊಮ್ಮೆ ನೋಡುವ ಅದಮ್ಯ ಬಯಕೆ ಆದರೇಕೆ ಬಾರದೆ ಹೋದೆ ನೀ ಬರೆಯೆಳೆದುಬಿಟ್ಟೆ ತುಡಿವ ಮನಕೆ ಗೊತ್ತುಗಿರಿಯಿರದ ಪಯಣದಲ್ಲಿ ದಿನವೂ ಅದೆಷ್ಟೋ ಜನರ ಭೇಟಿ ಬಂದು ಹೋಗುವ ಬಂಧಗಳಲಿ ನಿನ್ನ ಕಾಣುವ ಬಯಕೆಯೇ ಮೇಟಿ ಕಾಯಿಸದರು ಮಿಡಿವ  ಮನವ ನೀನಿಲ್ಲದೇ ನೀರಸವೀ ಪ್ರಯಾಣ ತುಂಬಲು ಈ ಬದುಕಿಗೆ ಸಂಭ್ರಮ ಮರೆಯದೇ ಮತ್ತೆ ಭೇಟಿ ಅಗೋಣ          ಶೈಲೂ....

268 ಮನೆಯೇ ನಂದನ

Image
ಮನೆಯೇ ನಂದನ **************** ಸಹಜತೆಯ ಪ್ರೀತಿಯಲಿ ಅರಳಿರುವ  ಮೊಗವಿರಲಿ ಪ್ರೀತ್ಯಾಧರಗಳು ಚಿಮ್ಮುತ್ತಿರಲಿ ಅನುದಿನವೂ ನಗುತಿರಲು ಜೀವನವು  ರಸಹೊನಲು ಆ ಮನೆಯೇ ನಂದನ..!! ಗುಡಿಗಿಟ್ಟ ಕಲಶದೊಲು ಬೆಳಕೀವ ದೀಪದೊಲು ಚೈತನ್ಯ ದ  ಹಸಿರಿನೊಲು ಪರಿಮಳದ ಕುಸುಮದೊಲು ಹೆಣ್ಣೊಂದು ನಗುತಿರಲು ಆ  ಮನೆಯೇ ನಂದನ..!! ನೋವಿರಲಿ ನಲಿವಿರಲಿ ಬಾಂಧವ್ಯ ಕುಸಿಯದಿರಲಿ ಸಿಹಿಜೇನ ಮಾತಿನಲಿ ವಾತ್ಸಲ್ಯ ತುಂಬಿರಲಿ ಮನ - ಹೃದಯ ಬೆರೆತಿರಲು ಆ ಮನೆಯೇ ನಂದನ..!! ದೇವನಲಿ ಮನ ಬೆರೆಸಿ ಹಿರಿಯರಲಿ ಶಿರ ಮಣಿಸಿ ಕಿರಿಯರನು ಅಪ್ಪಿ ಹರಸಿ ನಡೆಯಿರಲಿ ಸ್ನೇಹ ನೆನೆಸಿ ನಗುತಿರಲು  ಅನುದಿನ ಆ ಮನೆಯೇ ನಂದನ..!! ಸ್ತ್ರೀ ಗಿರಲು ಗೌರವಾದರ ಆ ಮನೆಗಿಹುದು  ದೈವದಾದರ ಎಲ್ಲಿ ನಗುವಳೋ  ಹೆಣ್ಣು ಆ ಮನೆಯಲಿಹುದು ಹೊನ್ನು ಹೆಣ್ಣಾದರೆ ಮನೆಯ ಕಣ್ಣು ಆ ಮನೆಯೇ ನಂದನ ಚಂದದ  ವೃಂದಾವನ...             ಶೈಲೂ.....

267 ಅನ್ನಕ್ಕಾಗಿ ಅರಸುತ

Image
#ಶೀರ್ಷಿಕೆ:-- #ಅನ್ನಕ್ಕಾಗಿ_ಅರಸುತ ಬಡತನವೇ ಕೂಪ ಹಸಿವೊಂದು ಶಾಪ ತುತ್ತನ್ನಕ್ಕಾಗಿ ಪ್ರತಿದಿನವೂ ಪರಿತಾಪ ಕಸದ ತೊಟ್ಟಿಯಲಿ ರಸವನ್ನು ಹುಡುಕುತ ಹೊರಟೆವು ನಾವು ಅನ್ನವನು ಅರಸುತ ಚಿಂದಿ ಆಯುವೆವು ತುತ್ತನ್ನಕ್ಕಾಗಿ ನಾವು ಯಾಕಿಟ್ಟನೋ ಭಗವಂತ ಈ ಪರಿ ಹಸಿವು ಕಸವೋ ಅಸಹ್ಯವೋ ಅದರ ಪರಿವಿಲ್ಲ ಹೊಟ್ಟೆ ತುಂಬಿದರೆಂದೇ ಹಬ್ಬ ನಮಗೆಲ್ಲ ಸೂರಿಲ್ಲದ ನಮಗೆ ಕೊಳವೆಯಾಶ್ರಯವು ಮಳೆಗಾಳಿ ಚಳಿಯಲ್ಲೂ ಇದೇ ಆಲಯವೂ ನಾಲ್ಕಾರು ಪಾತ್ರೆ ಪಡಗಗಳೇ ನಮ್ಮಯ ಸ್ವತ್ತು ಕುಳಿತೆವು ಶಪಿಸುತ್ತ ಬಡತನಕೆ ಬೇಸತ್ತು ಬಡತನದ ಕರ್ಮಕ್ಕೆ ಮಕ್ಕಳು ಜಾಸ್ತಿ ಹಸಿವೆ ತಾಳದೆ ಮಾಡುವವನ್ನಕ್ಕೆ ಕುಸ್ತಿ ಹೇಗೆ ಪೊರೆಯಲಿ ತಂದೆ ನಂಬಿದ ಕುಟುಂಬವ ಮಾಡಲಿನ್ನೇನಿಹುದು ಏಳಿ ಚಿಂದಿ ಆಯುವಾ   ಡಾ: B.N. ಶೈಲಜಾ ರಮೇಶ್

ಭಾಗೀರಥಿ

ಭಾಗೀರಥಿ ********* ಕಪಿಲಮುನಿಯ ಶಾಪದಿ ಗತಿಸಿದ ಸಗರನ ನೂರು ಮಕ್ಕಳ ಕಥೆಗೆ ಅವನ ವಂಶಜ ಭಗೀರಥನ ಪ್ರಯತ್ನ ಕಾರಣ ಗಂಗಾವತರಣವಾಗಲು ಧರೆಗೆ ಗತಿಸಿದ ಶತ ಪೂರ್ವಜರ ಪಾಪ ಪರಿಹರಿಸಲೋಸುಗ ಘೋರ ತಪವು ಮೃತರ ಭಸ್ಮದ ಮೇಲಿನಿತು ದೇವಗಂಗೆ ಹರಿದರಾಯಿತವರ ಪಾಪವಿಮೋಚನವು ಹರಿಯ ಪಾದದಿಂದುದಿಸಿದ ಗಂಗೆ ಭೋರ್ಗರೆದು ಧುಮ್ಮಿಕ್ಕಿ ಧರೆಯ ಕಡೆಗೆ ಅತಿರಭಸದಿಂ ಸುರಿದ ವೇಗಕ್ಕೆ ಧರೆನಡುಗೆ ಹರ ಧರಿಸಿದನವನ ಶಿರದ ಜಟೆಗೆ ಹರಣ ಜಟೆಯಿಂದಿಳಿದವಳು ಮೆಲ್ಲ ಭಗೀರಥನೊಡನೆ ಹರಿಯುತಿರಲು ಜಹ್ನು ಮುನಿಯು ಆಪೋಷಣಗೈಯ್ಯೇ ಭಗೀರಥ ನಮ್ರತೆಯಲಿ ಪ್ರಾರ್ಥಿಸಿರಲು ನಮ್ರ ಪ್ರಾರ್ಥನೆಗೆ ಮೆಚ್ಚಿ ಜಹ್ನುವು ತನ್ನ ಕರ್ಣದಿಂದ್ಹೊರಬಿಡಲಾಗಿ ಜಾಹ್ನವಿಯಾಗಿ ದೇವ ಗಂಗೆ ಹೊರಟಳವನ ಜೊತೆಜೊತೆಯಾಗಿ ಜಲಲ ಜಲಲ ಜಲಧಾರೆ ಹರಿಯಿತು ಸಗರನ ಶತ ಪುತ್ರರ ಭಸ್ಮದೆಡೆಗೆ ಭಗೀರಥನ ಶತ ಪ್ರಯತ್ನದ ಫಲದೆ #ಭಾಗೀರಥಿ ಎಂದ್ಹೆಸರಾಯ್ತು ಸುರಗಂಗೆಗೆ             ಶೈಲೂ......