ಭಾಗೀರಥಿ

ಭಾಗೀರಥಿ
*********

ಕಪಿಲಮುನಿಯ ಶಾಪದಿ ಗತಿಸಿದ
ಸಗರನ ನೂರು ಮಕ್ಕಳ ಕಥೆಗೆ
ಅವನ ವಂಶಜ ಭಗೀರಥನ ಪ್ರಯತ್ನ
ಕಾರಣ ಗಂಗಾವತರಣವಾಗಲು ಧರೆಗೆ

ಗತಿಸಿದ ಶತ ಪೂರ್ವಜರ ಪಾಪ
ಪರಿಹರಿಸಲೋಸುಗ ಘೋರ ತಪವು
ಮೃತರ ಭಸ್ಮದ ಮೇಲಿನಿತು ದೇವಗಂಗೆ
ಹರಿದರಾಯಿತವರ ಪಾಪವಿಮೋಚನವು

ಹರಿಯ ಪಾದದಿಂದುದಿಸಿದ ಗಂಗೆ
ಭೋರ್ಗರೆದು ಧುಮ್ಮಿಕ್ಕಿ ಧರೆಯ ಕಡೆಗೆ
ಅತಿರಭಸದಿಂ ಸುರಿದ ವೇಗಕ್ಕೆ ಧರೆನಡುಗೆ
ಹರ ಧರಿಸಿದನವನ ಶಿರದ ಜಟೆಗೆ

ಹರಣ ಜಟೆಯಿಂದಿಳಿದವಳು ಮೆಲ್ಲ
ಭಗೀರಥನೊಡನೆ ಹರಿಯುತಿರಲು
ಜಹ್ನು ಮುನಿಯು ಆಪೋಷಣಗೈಯ್ಯೇ
ಭಗೀರಥ ನಮ್ರತೆಯಲಿ ಪ್ರಾರ್ಥಿಸಿರಲು

ನಮ್ರ ಪ್ರಾರ್ಥನೆಗೆ ಮೆಚ್ಚಿ ಜಹ್ನುವು
ತನ್ನ ಕರ್ಣದಿಂದ್ಹೊರಬಿಡಲಾಗಿ
ಜಾಹ್ನವಿಯಾಗಿ ದೇವ ಗಂಗೆ
ಹೊರಟಳವನ ಜೊತೆಜೊತೆಯಾಗಿ

ಜಲಲ ಜಲಲ ಜಲಧಾರೆ ಹರಿಯಿತು
ಸಗರನ ಶತ ಪುತ್ರರ ಭಸ್ಮದೆಡೆಗೆ
ಭಗೀರಥನ ಶತ ಪ್ರಯತ್ನದ ಫಲದೆ
#ಭಾಗೀರಥಿ ಎಂದ್ಹೆಸರಾಯ್ತು ಸುರಗಂಗೆಗೆ

            ಶೈಲೂ......

Comments

Popular posts from this blog

ನನ್ನ ಕವನಗಳು

ಜಡೆಕವನ#ಸೋರುತಿಹುದು_ಮನೆಯ_ಮಾಳಿಗೆ

80. ಆಶಾವಾದ