ಪರಿಕಲ್ಪನೆ

ಪರಿಕಲ್ಪನೆ
*********

ಮನದಲಿ ಯಾರೋ
ಬಂದು ಕುಳಿತಂತೆ
ನೀನೇ ಇರಬಹುದೇನೋ
ಎಂಬ  ಚಿಂತೆ

ನಿನ್ನಾಗಮನ ತಂದಿತು
ಏನೋ  ಹೊಸತನ
ಮೂಡಿದೆ ಮನದಲಿ
ಹೊಸ ಸಂಚಲನ

ಮನದ ಭಾವವದು
ನೀಡಿದೆ ಏನೋ ಸೂಚನೆ
ನಿನ್ನಿರುವೇ ಚಂದ
ಅದು ಸುಂದರ ಪರಿಕಲ್ಪನೆ

ಸೂರ್ಯ ಕಿರಣ
ಸರಿಸಿದಂತೆ ತಮ
ನಗುವ  ಸಿರಿ ಮೊಗ
ಯಾವುದಕ್ಕೆ ಸಮ

ಭಾವವೇ ಜೀವವಾದಂತೆ
ಈ  ಬಾಳಿಗೆ
ಕನಸು ಮೂಡುತ್ತಿದೆ
ಸುಂದರ  ನಾಳೆಗೆ

ತುಸು ನಾಚಿಕೆ ತುಂಬಿದೆ
ಹೇಳಲಿ ಏನು ನಾನೀಗ
ಮಾತೇ ಬರದಂತೆ ಮಾಡಿದೆ
ಮೌನ.. ನೀ ಎದುರಾದಾಗ...

         ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ