ಅಹಮಿಕೆಯ ಪೊರೆಕಳಚು

ಅಹಮಿಕೆಯ ಪೊರೆಕಳಚು
**********************

ನಾನು ನಾನೆಂಬ ಅಹಂಮಿಕೆ
ಮನದೊಳುದಿಸುತಿರಲು
ಯಾರಿಲ್ಲ ನಮ್ಮ  ಸರಿಸಮಕೆ
ಕಂಡದ್ದೆಕ್ಕವೂ ತೃಣವೆನಿಸಿ
ಮೇಲು ಕೀಳೆಂಬ ಭಾವದೊಳು
ಅರಿಮೆ, ಹಿರಿಮೆಯೂ
ಮರೆಯಾಗಿ, ಬರಿದೇ
ಚೀರಾಟ ಹಾರಾಟ...

ನಾನೆಂಬುದ ಮರೆತು
ಎಲ್ಲವೂ, ಎಲ್ಲೆಡೆಯೂ ನೀನೇ
ಎಂಬ ಶರಣಾಗತಿಯಿರಲು
ಜಗವೊಂದು ಮಂದಿರ
ಸುಮಧುರ ಸುಂದರ
ಸಿರಿ ಸ್ನೇಹದ ಹಂದರ
ಪ್ರೀತಿ ಹೊಳೆ ಹರಿದು
ಮಿಂದರದರಲ್ಲಿ ಬಾಳು ಸುಂದರ....

ಇರಿಸು ನೀ ಹೀಗೆಯೇ ನನ್ನ
ಧರಿಸದಂತೆ ಅಹಮಿಕೆಯ ವಸನ
ಬೆರೆಸಿ ಎಲ್ಲೆಡೆ ಸಿರಿಸ್ನೇಹವನ್ನ
ಬರುತಿರಲಿ ಸುಮಧುರ ವಚನ
ಬರೆಸು ಕೈಹಿಡಿದೆನ್ನ... ಸದಾ
ನಿನ್ನದೇ ನಾಮಾಮೃತವನ್ನ
ತೃಣಕಾಷ್ಠದಲೂ ತೋರಿಸು
ನಿನ್ನೀರುವಿಕೆಯ  ಬೆಳಗಿಸು....

ಪೊರೆ ಕಳಚಿಬಿಡು ದ್ವೇಷ ಭಾವಗಳ
ಮೇಲು ಕೀಲುಗಳ, ಜಾತಿಬೇಧಗಳ
ಎಲ್ಲರಲ್ಲಿಯೂ ತೋರು ನಿನ್ನ ಆವಿರ್ಭಾವ
ಬದುಕು ಕ್ಷಣ ಮಾತ್ರದ್ದು
ನೀರಮೇಲಿನ ಗುಳ್ಳೆಯಂತೆ
ನಿನ್ನ ನಾಮವೇ ಅಜರಾಮರ
ಇರಿಸು ಸ್ವಂತಿಕೆಯಲಿ ಮನಸು
ನೀಡು ಶರಣಾಗತಿಯ ಭಾವ

           ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ