ಹೇಗೆ ಅರಿಯಲಿ ನಿನ್ನ

ಹೇ ಮಾಧವಾ
ಹೇಗೆ ಅರಿಯಲಿ
ನಾ ನಿನ್ನ ಮನವಾ
ಬಂದಂತೆ ಬಂದು
ಮಾಯವಾಗುವವ
ಕಿರುನಗೆಯಲ್ಲೇ
ಮನವ ಸೆಳೆದವ
ಆಸೆಗಳ ಬಿತ್ತಿ
ಕಣ್ಮರೆಯಾದವ
ಕಣ್ಣಲ್ಲಿ ತುಂಬಿಕೊಂಡವ
ಹೃದಯದಲ್ಲಿ
ನೆಲೆನಿಂತವ
ಕನಸಲ್ಲಿ ಬಂದು
ಕಾಡುವವ
ಮೆಲುನುಡಿಯಲ್ಲಿ
ಕೆನ್ನೆ ರಂಗೇರಿಸಿದವ
ಮೈಮನವನೆಲ್ಲಾ
ಆವರಿಸಿಕೊಂಡವ
ಆದರೂ ನೀ 
ಅರಿಯಲಾರದವ
ಅರಿವಿಗೆ ಸಿಗದವ
ನಾ ಹೇಗೆ ಅರಿಯಲಿ
ಹೇಳು ನಿನ್ನ ಮನವಾ..??

         ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ