ಎಲ್ಲ ಮರೆತು

ಎಲ್ಲ ಮರೆತು
***********

ಗುನುಗುತಿದೆ ಸಂಭ್ರಮದಿ
ಮನದೊಳೊಲವಿನ  ಗೀತೆ
ನಮ್ಮಿಬ್ಬರಲೂ  ಕಾಣುತಿದೆ
ಪ್ರೀತಿಯ  ಏಕತಾನತೆ

ನಿನ್ನ ಕೊಳಲಿನ ಗಾನ
ಅದು ನನ್ನೊಲವಿನ ಹಾಡು
ಹೊನಲಾಗಿ ಹರಿಯುತಿದೆ
ಜಗದೊಳೆಲ್ಲೆಡೆ  ನೋಡು

ನಿನ್ನ ಕಣ್ಣಿನ  ಕಾಂತಿ
ನನ್ನ  ಬಾಳಿನ  ಪ್ರಣತಿ
ಬೆಳಗುತಿದೆ ಝಗಮಗಿಸಿ
ನೋವ ಕತ್ತಲ  ಮರೆಸಿ

ಕಣ್ಹೊಳಪಿನ  ಆ  ಪ್ರಭೆಗೆ
ಕರಗುತ್ತಿದೆ ಈ  ಜೀವ
ನಿನ್ನನುಳಿದು ಜಗದೊಳಗೆ
ಬೇರೆ ಹಿತವರಿಲ್ಲ  ದೇವ

ಇರಲಿ  ಹೀಗೆಯೇ  ಹರುಷ
ಕಾಲಚಕ್ರ ನಿಂತು ಬಿಡಲಿ
ತುಂಬಿ ಕಣ್ಣಲಿ ನಿನ್ನ  ಚಿತ್ರ
ಎಲ್ಲವನೂ  ಮರೆಸಿಬಿಡಲಿ

        ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ