173 ಜಡೆಕವನ#ಬೆಳ್ಳಿ_ಮೋಡದ_ಚಿತ್ತಾರ

#ಜಡೆಕವನ

#ಬೆಳ್ಳಿ_ಮೋಡದ_ಚಿತ್ತಾರ

ಬಾನಲ್ಲಿ ತೇಲುತಿದೆ ಬೆಳ್ಮುಗಿಲು
ಬೆಳ್ಮುಗಿಲಲಿ ವಿಧ ವಿಧ ರೂಪಗಳು
ರೂಪಗಳು ಸೆಳೆಯುತಿದೆ ಕಣ್ಮನವ
ಕಣ್ಮನವ ತುಂಬಿದೆ ಬಾನ ಸೌಂದರ್ಯ
ಸೌಂದರ್ಯವ ಬಾನಲ್ಲಿ ತುಂಬಿದವರ್ಯಾರು?
ಯಾರು ಬಳಿದರದಕೆ ನೀಲಿ ಬಣ್ಣ?
ಬಣ್ಣವಿದು ಆಹಾ ಎಂಥಾ ಸುಂದರವಣ್ಣ
ಅಣ್ಣಾ ನೋಡಲ್ಲಿ ತೇಲುತಿದೆ ಮೋಡ
ಮೋಡ ಹತ್ತಿಯುಂಡೆಯಂತೆ ತೇಲಿ
ತೇಲಿತೇಲಿ ಹರಡುತ್ತಿದೆ ಅಂತ ಆಗಸ
ಆಗಸದ ತುಂಬೆಲ್ಲ ಬೆಳ್ಳಿ ಮೋಡದ ಚಿತ್ತಾರ
ಚಿತ್ತಾರವಿದು ಸ್ವಚ್ಛ ಸುಂದರ ನಿರ್ಮಲತೆಯ ಸಾಕಾರ
ಸಾಕಾರವಿದು ಅದ್ಭುತ.!! ತೇಲಿಬಿಟ್ಟವನ್ಯಾರೋ ಮುಗಿಲು
ಮುಗಿಲ ಬೆಳಗಿಹುದು ರವಿಕಾಂತಿ
ರವಿಕಾಂತಿಯಿಂದಲೇ ಜಗಕೆ ಬೆಳಕು
ಬೆಳಕಿತ್ತು ಬದುಕಿತ್ತ ಆ ಸೂರ್ಯ ದೇವ
ದೇವ ನಮ್ಮ ಎಡಬಿಡದೆ ಕಾವ
ಕಾವನವನೇ ಅವಗೆ ನಮಿಸುವ🙏🙏

            ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು