ಸಹಾಯದ ಗುಣವಿರಲಿ

ಸಹಾಯದ ಗುಣವಿರಲಿ

ಸಿರಿತನದ ಸಿರಿಯೊಡನೆ ಸಹಾಯದ ಗುಣವಿರಲಿ
ಸಹಾಯ ಹಸ್ತದಲೂ ಮಾನವೀಯತೆ ತುಂಬಿರಲಿ

ಬಡತನದ ಬೇಗೆಯಲಿ ಮನವು ಸ್ಥಿಮಿತದಲ್ಲಿರಲಿ
ದುಡಿಮಿಯೇ ದೇವರೆಂಬ ಮಂತ್ರ ನಿನದಾಗಲಿ

ಸಿರಿತನವಿಹುದೆಂದು ಅಹಮಿಕೆ ಬರದಿರಲಿ
ಎಲ್ಲರೊಂದಾಗಿ ಬೆರೆವ ಉನ್ನತ ಗುಣವಿರಲಿ

ಕೊಡುಗೈಯ್ಯ ದಾನಕ್ಕೆ ಬಡತನ ಬಾರದಿರಲಿ
ಹಂಚಿತಿನ್ನುವ ಗುಣವು ಮೈಗೂಡಿ ಬರಲಿ

ಇಲ್ಲದವರ ಕಂಡರೆ ಕೆಡುನುಡಿಯು ಬಾರದಿರಲಿ
ಉಳ್ಳವಗೆ ಮಣೆಹಾಕುವ ಚಾಳಿ ಇಲ್ಲದಿರಲಿ

ನಾನು ನಾನೆಂಬ ಸ್ವಾರ್ಥಕ್ಕೆ ಮನವು ಬಲಿಯಾಗದಿರಲಿ
ನಾವೆಲ್ಲರೊಂದೆ ಎನ್ನುವ ಸಮಷ್ಠಿಯ ಗುಣವಿರಲಿ

ನೊಂದುಬೆಂದವರ ಕಣ್ಣೀರ ತೊಡೆವ ಹಸ್ತವಿರಲಿ
ವಸುದೈವ ಕುಟುಂಬದಲ್ಲಿ ಮನಃತೃಪ್ತಿಯಿರಲಿ

           ಶೈಲೂ........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ