ಸವಿನೆನಪುಗಳು ಬೇಕು ಬಾಳಿನಲ್ಲಿ


ಸವಿನೆನಪುಗಳು ಬೇಕು ಬಾಳಿನಲ್ಲಿ
****************************
ಸವಿ ನೆನಪುಗಳು ಬೇಕು ಬಾಳಿನಲ್ಲಿ
ಕಹಿನೆನಪುಗಳ ನೋವ ಬಾಧೆ ಮರೆಯಲು
ಸವಿನೆನಪ ನವಿರು ಭಾವದಲಿ ಬೆರೆತು
ಮನಹಿಂಡುವ ನೋವ ಛಾಯೆ ಅಳಿಸಲು

ಸವಿನೆನಪುಗಳು ಬೇಕು ಬಾಳಿನಲ್ಲಿ
ಮತ್ತೆ ಮತ್ತೆ ನೆನೆನೆನೆದು.ದಿನ ದೂಡಲು
ಅಂತರಂಗ ಕಲಕುವ ಕೊಳೆಯ ತೊಳೆದು
ಮನದಂಗಳದೆ ನಗುವ ಚತ್ತಾರ ಬಿಡಿಸಲು

ಸವಿ ನೆನಪುಗಳು ಬೇಕು ಬಾಳಿನಲ್ಲಿ
ಬಾಳಿನಿರುಳ ಬಾನಿನಲ್ಲಿ ಚುಕ್ಕಿಯಂತೆ ಬೆಳಗಲು
ತಮವ ಬದಿಸರಿಸಿ ಮೆಲ್ಲ ಮೆಲ್ಲನೆ
ಬೆಳಗುವ ಚಂದ್ರಮನಂಥ ಸುಹಾಸ ಮೂಡಲು

ಸವಿ ನೆನಪುಗಳು ಬೇಕು ಬಾಳಿನಲ್ಲಿ
ಬಾಳ ಪಯಣದಾಯಾಸ ಮರೆಸಲು
ತಡವಿ ಎಡವಿ ಮುಗ್ಗರಿಸುವ ನಡಿಗೆಗೆ
ತುಂಬಿ ಉತ್ಸಾಹ ಕಾರಂಜಿಯಂತೆ ಚಿಮ್ಮಲು

           ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು