ಎಲ್ಲವೂ ನೀನೇ

ಎಲ್ಲವೂ ನೀನೇ
*************

ಕಷ್ಟದ ಹಾದಿಯಲೆನ್ನ
ಎತ್ತಿ ನಡೆಯುವೆ ನೀನು
ಇಷ್ಟಾರ್ಥ ವ ಕೊಡುವ
ನೀ ಕಾಮಧೇನು..!

ದುಃಖದಲ್ಲಿರಲು ಬಳಿಸಾರಿ
ಸಂತೈಸುವೇ ನೀನು
ಮೈದಡವಿ ಸಲಹುವೆ
ನಿನ್ನ ನುಡಿ ಸವಿಜೇನು..!

ಇಷ್ಟ ಬಾಂಧವನಾಗಿ
ಬೆರೆತಿರುವೆ ಮನದಲ್ಲಿ
ರಾರಾಜಿಸುತ್ತಿರುವೆ
ಹೃದಯ ದೇಗುಲದಲ್ಲಿ..!

ಪ್ರತಿ ಹೆಜ್ಜೆಗೂ ಸಂಗಾತಿ ನೀನಿರಲು
ಬಾಳಪಯಣವದು ಅತಿಮಧುರ..!
ತೃಪ್ತಳಾಗಿರುವೆ ನಾನು
ಬೇಡಲಿಹುದಿನ್ನೇನು  ಮುರಳೀಧರ..!

        ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ