★★ನಕ್ಷತ್ರ★★


★★ನಕ್ಷತ್ರ★★
**************

ಆ ಬಾನ ಬಾಂದಳದಲ್ಲಿ
ನಲಿವೆ ನೀ ಚಂದ್ರಮಾ
ಅಗಣಿತ ತಾರಾಗಣಗಳ
 ಜೊತೆ ನಿನ್ನ ಸಂಭ್ರಮಾ..!!

ಇರುಳ ತೆಕ್ಕೆಯಲ್ಲಿ ಮಲಗಿ
ನಕ್ಷತ್ರಗಳು ಪದ ಗುನುಗಿ
ತಂಗಾಳಿ ಜೋಗುಳದ ಲಾಲಿ
ನೀಲಾಕಾಶ ಪರಿಧಿಯ ಬೇಲಿ..!!

ಬಾನಂಚಲಿ ಮಿನುಮಿನುಗಿ
ಹೊಳೆವ ನಕ್ಷತ್ರದ ಜೊತೆಗೆ
ಉತ್ಸವ ಹೊರಟಿತೆಲ್ಲಿಗೆ ಶಶಿ
ನಶೆಯಿರುಳ ಬೆಳಗಲೆಂದೇ..?

ಕ್ಷಿತಿಜದಲಿ ಕ್ಷಯವಿರದ ..ಓ
ತಾರಾಲೋಕದ ನಕ್ಷತ್ರಗಳೇ
ಮುಗಿಲಕಾಂತಿಗೆ ಝಗಮಗಿಸೋ
 ನೀವ್ಹಚ್ಚಿಟ್ಟ  ಹಣತೆಗಳೇ?

ಹಗಲಲ್ಲಿ ರವಿಕಾಂತಿ ಪ್ರಭೆ
ಇರುಳು ಶಶಿಕಾಂತನ ನಗೆ
ಅವನ ನಗೆಗೆ ಹೊಸತು ಬಗೆ
ನಕ್ಷತ್ರ ಹೊಳಪಿಸಿ ಮಿನುಗೆ..!!

             ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ