ಪ್ರೇಮಕಾವ್ಯ

:.ಪ್ರೇಮಕಾವ್ಯ
***********

ಸುಮ್ಮನಿದ್ದ ಮನಸ ತಟ್ಟಿ ತಟ್ಟಿ
ಬೀಡು ಬಿಟ್ಟನೇ ಒಳಮನಸ ದಾಟಿ
ದೂಡಿದರೂ ಮನವ ಹಿಮ್ಮೆಟ್ಟಿ
ಮಾಡಿಬಿಟ್ಟನೆ ಮುಗ್ಧತೆಯ ಲೂಟಿ

ಹೇಳಲಾಗದು ಒಳಮನದ ಕಲರವ
ತಡೆಹಿಡಿದರೂ ಮನ, ದುತ್ತನೆದುರು ಬರುವ
ಮುಚ್ಚಿದ ಕಣ್ಣೆವೆಯೊಳಗವನದೇ ಚಿತ್ರ
ಕಣ್ತೆರೆಯಲೆದುರಿಗೆ ಅವನ ಸಚಿತ್ರ

ಮೋಡಿ ಮಾತಲೇ ಉಲಿದ ನೀನನ್ನ ಮನದನ್ನೆ
ನಾಚಿ ಕೆಂಪೇರಿಸಿ ರಂಗಾಗಿಸಿದ ಕೆನ್ನೆ
ಹೇಳಲಾಗದೇನೂ ತಳಮಳದ ಪುಳಕ
ಒಮ್ಮೆಗೇ ನುಗ್ಗಿದಂತೆ ಭಾವನೆಗಳ ಪ್ರವಾಹ

ಆಗಿಬಿಟ್ಟೆನೇ ನಾನವಗೆ ಪರವಶ
ಅವನಾದನೆನ್ನ ಬಾಳಿಗೆ ಪ್ರಕಾಶ
ಅರಿವು ಮೂಡುವ ಮೊದಲೇ ಸೋತೆ
ಅರಿತಾದಮೇಲವನಲೇ ಬೆರೆತೆ

ಮರೆತಾದರೂ ಮರೆಯಲಾಗದ ಮಾಣಿಕ್ಯ
ಅವನಿಂದಲೇ ಸಂಸಾರ ಸಾರ ಸೌಖ್ಯ
ಪ್ರೀತಿಯೊಸಗೆಯ ಮಧುರ ಪ್ರೇಮದ ಭಾಷ್ಯ
ಬರೆದನೇ " ರಮೇಶ " ಬಾಳಿಗೆ ಪ್ರೇಮಕಾವ್ಯ

ಅರಿಯಲಾಗದ ಚಂದಾದಾನುಭೂತಿ
ಬಂಧಿಸಿದೆನ್ನನು ಅವನ ಮುಗ್ಧ ಪ್ರೀತಿ
ಗೊಂದಲದ ತಮವ ಸರಿಸಿ ಬೆಳಕಾಗಿಬಿಟ್ಟ
ನಸುನಗುತಲೆನ್ನ ಬದುಕ ಉಸಿರಾಗಿಬಿಟ್ಟ

                 ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ