ಸೋತು ಗೆದ್ದವನು

ಸೋತು ಗೆದ್ದವನು
***************

ಜಗದ ನಡೆಯಿದು ಹೀಗೆಯೇ
ಇರಬೇಕೆಂಬ  ತಹತಹಿಕೆಯಲಿ
ಈ  ಕೊಡುಕೊಂಬುವಾಟದಲಿ
ಸೋತು ಗೆದ್ದವನು  ನೀನು....!

ಜನನಿ - ಜನ್ಮದಾತೆಯ ಮರೆತು
ಸಾಕಿದವಳ ಪ್ರೀತಿಯಲಿ  ಬೆರೆತು
ವಿಷವುಣಿಸಿದವಳ ತೆಕ್ಕೆಯಲೂ ಮಲಗಿ
ಸೋತು ಗೆದ್ದವನು  ನೀನು....!

ಕಿರುಗೆಜ್ಜೆಯನು ಘಲಿಸಿ, ಎಲ್ಲರನು ನಗಿಸಿ
ವಿಷಕಾರುವ ಕಾಲಿಂಗನನು ಮಣಿಸಿ
ಜಗವನ್ನೇ ತನ್ನೊಡಲಲ್ಲಿ ಧರಿಸಿ
ಸೋತು ಗೆದ್ದವನು  ನೀನು....!

ಗೋಪಿಕೆಯರ ವಸ್ತ್ರಾಪಹರಣವಂತೆ
ಮತ್ತೊಂದೆಡೆ ಸೀರೆಯ ಮೆಗೆಮೊಗೆದಿತ್ತೆಯಂತೆ
ತುಸು ಪ್ರೀತಿ ಕೊಟ್ಟರೂ ಅಪ್ಪಿ ಹರಸುವೆಯಂತೆ
ನಿಜವಾಗಿಯೂ ನೀನು ಸೋತು ಗೆದ್ದವನಂತೆ....!

ಹಿಡಿ ಅವಲಕ್ಕಿಯ  ಋಣಭಾರಕೆ
ಕಡು  ಭಾರದ ಸಿರಿಯ ನೀನಿತ್ತೆ
ಸ್ನೇಹಭಾವದ ಸವಿಯಪ್ಪುಗೆಯ ಬಿಸಿಗೆ
ಕರಗಿ ಸೋತು ಗೆದ್ದವನು ನೀನು....!

ನಂಬಿ ಬಂದವರ ಕಣ್ಣೀರನೊರೆಸಿ
ದ್ವೇಷಅಂಧಕಾರಗಳ ತೆರೆಯನ್ನು ಸರಿಸಿ
ಸವಿ ಮಾತುಗಳ ಅಕ್ಕರೆಯ ಉಣಿಸಿ
ಸೋತು ಗೆದ್ದವನು ನೀನು....!

ಜಗದ ಜೀವಿಗಳ ಹಸಿವೆ ತಣಿಸಿದವ
ತುಸು ಮೊಸರು ಬೆಣ್ಣೆಗೆ ತನ್ನನೆ ಕೊಟ್ಟವ
ಆದರೂ ಹೊತ್ತು ಕಳ್ಳನ ಪಟ್ಟವ
ಸೋತು ಗೆದ್ದವನು ನೀನು....!

ಹೂವ ತರುವರ ಮನೆಗೆ ಹುಲ್ಲ ತರುವವನು
ಭಕ್ತಿ ಭಾವಕೆ ಕಟ್ಟು ಬಿದ್ದವನು
ಅಪವಾದವೆಲ್ಲವ ತಾನೇ ಹೊತ್ತವನು
ನಿಜದಿ ನೀ ಸೋತು ಗೆದ್ದವನು....!

ಜಗದೊದ್ಧಾರಕೆ ಗೀತಾಮೃತವಿತ್ತ
ಫಲಾಫಲಗಳ ಹೊರೆಯ ತಾನೇ ಹೊತ್ತ
ನಂಬಿದವರ ಕಷ್ಟ ನಿವಾರಿಸುತ್ತ
ಸೋತು ಗೆದ್ದವನು ನೀನು....!

ಮೂಲೋಕದ ಕೀಲಿ ತನ್ನ ಕೈಯಲ್ಲಿ
ಆದರೂ ಮರುಳಾಗಿ ಮಾಯೆಗೆ ಜನಿಸಿದನಿಲ್ಲಿ
ನಾಮದ ಬಲದಿಂದಲೇ ಜಗವ ಕಾಯುವವನು
ಪ್ರೇಮಭಕ್ತಿ ಗೆ ಸೋತು ಗೆದ್ದವನು....!

ಸಕಲ ಚರಾಚರ ನಿನ್ನಾಧೀನ..!
ನೀನು ಮರುಳ.. ಭಕ್ತರಾಧೀನ..!
ಎಲ್ಲರ ಅರಿವಿನ ಕಣ್ಣನು ತೆರೆಸಿ..!
ಪೊರೆಯುವೆ ಸ್ವಾಮಿ ಕೃಷ್ಣನೆಂದೆನಿಸಿ..!

                ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ