248ಭಾವ ಜೀವಿಯ ಮೌನ


ಭಾವ ಜೀವಿಯ ಮೌನ
*******************

ತವಕಿಸುತ್ತಿವೆ ಹೊರಹೊಮ್ಮಲು
ತುಟಿಯಂಚಲಿ  ಭಾವನೆಗಳು
ಮನದಾಳದಲ್ಲಿ ಅವಿತಿದ್ದ
ಕವಿಮನದ ಮಾತುಗಳು

ತವಕಿಸುತ್ತಿವೆ ಹೊರಹೊಮ್ಮಲು
ಕಣ್ಣಂಚಿನಲ್ಲಿ ಮಿಂಚುಗಳು
ಎದೆಯಾಳದಿ ಮುಳುಗಿದ್ದ
ಒಳಮನದ ನೋವುಗಳು

ತವಕಿಸುತ್ತಿವೆ ಹೊರಹೊಮ್ಮಲು
ಅಂತರಾಳದ  ಭಾವಗಳು
ಆಸ್ಥೆಯಲಿ ಬರೆದಿದ್ದ
ಹೃದಯಂಗಮ ಸಾಲುಗಳು

ತಡೆಯುತ್ತಿದೆ  ಬಲವಾಗಿ
ಕಾಣದ ಕೈಯ ಗೋಡೆಗಳು
ಶರಣಾಗಿದೆ  ಮೌನಕೆ
ಭಾವಜೀವಿಯ  ಅನಿಸಿಕೆಗಳು

     ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ