ನನ್ನೆದೆಯ_ಬಾಂದಳಲಿ_ತಾರೆ_ನೀನು

#ಭಾವಗೀತೆ_

#ಶೀರ್ಷಿಕೆ

#ನನ್ನೆದೆಯ_ಬಾಂದಳಲಿ_ತಾರೆ_ನೀನು

ನನ್ನೆದೆಯ ಬಾಂದಳಲಿ ತಾರೆ ನೀನು |
ನಿನ್ನೊಲವ ಬಂಧನದಿ ಖೈದಿ ನಾನು ||

ಮೀಟುತಿರುವೆ ನೀ ನನ್ನ ಮನದ ವೀಣೆ
ಮಧುರ ಸುಸ್ವರದ ರಾಗದಾಲಾಪ ನಾನೇ
ಎದೆಯ ತಂತಿಯ ನವಿರಾಗಿ ಮೀಟಿ ಮಿಡಿದೆ
ಮನವ ನಲಿಸುವ ಪ್ರೇಮರಾಗ ನುಡಿದೆ ||
||ನನ್ನೆದೆಯ||

ಹಚ್ಚಹಸಿರು ವನಸಿರಿಯ ನಡುವೆ
ಅರಳಿ ಘಮಿಸುವ ಹೂವಂತೆ ನಲಿವೆ
ಬೀಸಿ ಪ್ರೇಮದಬಲೆಯ ಒಲಿಸಿ ತಾನು
ಮಕರಂದ ಹೀರಲು ಬಂದ ಭೃಂಗ ನಾನು||
||ನನ್ನೆದೆಯ||

ಬಾಳ ಬೆಳಗಲು ಬಂದ ಭಾಗ್ಯದೇವತೆ
ಕಾಪಿಡುವೆ ಬರದಂತೆ ಯಾವ ಕೊರತೆ
ಪ್ರೀತಿಮಳೆಹನಿಸಿ ಹಸಿರಾಗಿಸಿದೆ ಬಾಳು
ಒಲವ ಜೇನಹೊಳೆಯಲ್ಲಿ ಮೀಯುವೆ ತಾಳು||
|| ನನ್ನೆದೆಯ||

ಗುನುಗುತಿದೆ ಮನದಲ್ಲಿ ಒಲವ ಭಾವಗೀತೆ
ಪ್ರತಿ ಪದ ಪದದಲ್ಲೂ ನಿನ್ನೊಲವ ಮಾತೇ
ಬಾಳ ಪ್ರತಿ ಪುಟದಲ್ಲೂ ನಿನ್ಹೆಸರ ಬರೆದಿರುವೆ
ಎದೆಯಗುಡಿಯಲಿ ಗೆಳತಿ ನೀನೇ ಕುಳಿತಿರುವೆ||
||ನನ್ನೆದೆಯ||

                    ಶೈಲೂ.......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ