97. ಕವಿತೆ.. ಅವನು ಮತ್ತು ನಾನು

" ಕವಿತೆ " 

ಅವನು ಮತ್ತು  ನಾನು
******************

ಕವಿತೆ..!!  ಕವಿತೆ..!!
ಸುಂದರ ಪದಗಳಲ್ಲಿ ಕುಳಿತು
ಬೆಸೆಯಿತು  ನನ್ನ.... ನಿನ್ನ.
ಮನದ  ಭಾವಗಳು ತಾಕಿ  ಹೊಸೆಯಿತು
ಹೊಂಗನಸನ್ನ...
ಮೃಧು ಮಧುರ ನುಡಿ
ಮುದಗೊಳಿಸಿ ಮನವನ್ನ...
ಬದುಕ  ಕಹಿ ನೆನೆಹುಗಳ ಝಾಡಿಸಿ  ಒಗೆದು
ಹಾಗುರಾಯ್ತೆ ನ್ನ  ಮನ...
ಕವಿತೆ  ಬರೆಯಲೇನಗೆ ನೀನಾದೆ ಸ್ಫೂರ್ತಿ...
ಇರಲಿ  ಸವಿ ಸ್ನೇಹ
ಹೀಗೆಯೇ ಜೀವನ ಪೂರ್ತಿ...
ನಿನ್ನ ಸ್ಫೂರ್ತಿ ತುಂಬಿದಸ್ನೇಹದಾ  ನುಡಿಯ
ನಾನೆಂದು  ಮರೆಯಲಾರೆ...
ನೀ ಅಳೆದು ತೂಗಿ ಬರೆದ ಕವಿತೆಗೆ
ಕಾವ್ಯ ಕನ್ನಿಕೆ ನಾನೇನು..?
ನಾನೆಂದೆಂದಿಗೂ  ನನ್ನ  ಮನ ಮೋಹಕ ಮಾಧವನಾ  ರಾಧೆ...
ಕಲ್ಪನೆಗೂ ಮೀರಿ  ಸಂಭ್ರಮಿಸಿದೆ
ತುಂಬುತ್ತೇನೆಂದು ನಿನ್ನೆದೆ...
ಹೇ !! ಸುಮಧುರ  ಕವಿತೆ !!
ಬಳಸಿ ಸುಂದರ ಪದಗಳ 
ಖುಷಿಯಾಗಿದ್ದರೆ ಆನಂದಿಸು.....
ನೀಗಿದ್ದರೆ  ವ್ಯಥೆ ಸಂಭ್ರಮಿಸು......

        ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ