96. ಚದುರಂಗ

ಚದುರಂಗ
ಬಾಳೊಂದು ಚದುರಂಗದಾಟ
ನಿಯಾಮಕನವ ಸೂತ್ರಧಾರ
ನಾವೆಲ್ಲಾ ದಾಳದ ಬೊಂಬೆಗಳು

ನಮ್ಮ ವಿಧಿಲಿಖಿತದಂತಿಹುದು
ನಾವಾಡುವಾ ಪಾತ್ರದಾಟ
ಸೋಲೊ ಗೆಲುವೋ ಅವ ತಾ ಬಲ್ಲ

ಕೆಲವೊಮ್ಮೆ ಸೋಲು ಕೆಲವೊಮ್ಮೆ ಗೆಲುವು
ಅವನ ಹಿಡಿತದಲಿಹುದು ಸೂತ್ರ
ಜೀವನದಲಿಹುದಂತೆ ಏರಿಳಿತ

ಹೂಟವೋ ಮಾಟವೋ ಆಟವೋ
ಆಡಲೇ ಬೇಕಿಲ್ಲಿ ಆಟ 
ತಂತ್ರಕ್ಕೆ ಹೊಸೆದು ಪ್ರತಿತಂತ್ರ

ಗೆಲುವ ಗಮ್ಯ ಸೇರಲಿಹುದು
ಹತ್ತಾರು ಅಡೆತಡೆ ಸವಾಲು
ಚಿತ್ತವಿರಿಸಿ ನುಗ್ಗೆ ಗೆಲುವು ನಿನ್ನ ಪಾಲು

ಸೋಲು ಗೆಲುವಿಹುದು ಸಹಜ
ಹಿಗ್ಗಿ ಕುಗ್ಗುವುದು ಹೇಯ
ಸಮಚಿತ್ತದಲಿ ಬೆರೆಯೆ ಇಲ್ಲ ಅಪಾಯ

ಇಲ್ಲಿ ಅಧಮ ಉತ್ತಮರಿಲ್ಲ
ಎಲ್ಲರೊಂದೆ ಅವನ ಸೃಷ್ಟಿಯಲಿ
ಪ್ರಾಮಾಣಿಕ ವಿಜೇತ ಅವನ ದೃಷ್ಟಿಯಲಿ

ಸೋಲುಗೆಲುವು ನೋವು ನಲಿವು
ಎಲ್ಲರಿಗೂ ಸಮಾನ ಅವನಿತ್ತ ಪಾತ್ರ
ಮುಗಿದೊಡನೆ ಆಟ ಎಲ್ಲ ಅವನಲ್ಲೇ ಮಿಳಿತ

          ಶೈಲೂ........

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ