93.ಗಝಲ್

ಗಝಲ್

ಮತ್ತೆ ಬರುವ ದೀಪಾವಳಿಗೆ ಕಾದಿದ್ದೇನೆ
ಸಾಲು ಹಣತೆಗಳ ಬೆಳಗಲು ಉತ್ಸುಕಳಿದ್ದೇನೆ

ತಮವ ಓಡಿಸಲು ಬೆಳಕುಗಳ ಮಾಲಿಕೆ
ಪಟಾಕಿಗಳ ಸುಡಲು ತಡೆಹಿಡಿದಿದ್ದೇನೆ

ತೈಲಾಭ್ಯಂಜನದಲಿ ಕಳೆದೆಲ್ಲ ಕೊಳೆಯ
ಮನದ ಮೌಢ್ಯತೆಯ ಕಳೆಯ ತೊಳೆಯಲಿದ್ದೇನೆ

ಸಿಹಿ ಅಡಿಗೆಯ ಮಾಡಿ ದೈವ ನಿವೇದನೆಗೆ
ಬದುಕಲಿ ನೆಮ್ಮದಿಯು ಬೇಕೆಂದು ಕೇಳಲಿದ್ದೇನೆ

ಆಚರಣೆಯಲ್ಲಿ ವಿವಿಧತೆಯು ಸಹಜ
ಶೈಲೂವಿನ ಮನದಂತೆಯೇ ನಡೆಯುತ್ತೇನೆ...

              ಶೈಲೂ...

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು