90.ಗೊಂದಲಗಳ ಗೂಡು

ಗೊಂದಲಗಳ ಗೂಡು
ಮನಸ್ಸೆಂಬುದೊಂದು
ಭಾವನೆಗಳ ತೂಗುಯ್ಯಾಲೆ
ಸಂಘರ್ಷ ಗಳ ನಡುವೆ
ತಾಕಲಾಟ, ಪೀಕಲಾಟ
ಕೊನೆಗೇನೋ ಹುಡುಕಾಟ
ಹುಡುಕುವ ಭರದಲ್ಲಿ
ಇದ್ದದ್ದು ಮರೆಯಾಯ್ತು
ಕಂಡದ್ದು ಕಹಿಯಾಯ್ತು
ಬುಡ ಮೇಲಾದ
ಭರವಸೆಗಳ ನಡುವೆ
ಬದುಕು ಕಟ್ಟುವಾ  ಬವಣೆ
ಬಾರದಾ  ನಗುವನ್ನು
ಬಲವಂತದಲಿ  ಬರಿಸಿ
ಬಾಗಿ ಬೀಗುತ್ತಾ
ಬದುಕುವಾ ಪರಿ
ಮುರಿದ ಕನಸುಗಳ
ಮಧ್ಯದಲಿ ನಿಂತು
ಮಾಯವಾಯಿತು
ಮಧುರ ಮನಸು
ಮನಸ್ಸಿನೊಳಗಣ ಸುಪ್ತ
ಮಸಸ್ಸಿಗೆ  ಘಾಸಿಯಾಗಿ
ಮನಸ್ಸಿಲ್ಲದ ಮನಸ್ಸಿನಿಂದಲೇ
ಮೌನತಾಳಿ ಹೇಳಿದೆ
ಮಾತು ಬೇಕಿಲ್ಲ
ಮೌನವೇ ಲೇಸೆಂದು
ಮನದ ಮಾತನು 
ಮನ್ನಿಸಲು ನಾನಿಂದು
ಮೌನದಲಿ ನಾನಿದ್ದೇನೆ
ಮನ್ನಿಸಿರಿ  ಎನ್ನ....😔😔😔

         ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ