88. ಆಶಾವಾದ

ಆಶಾವಾದ
**********

ಆಶಾವಾದವಿರಲಿ
ಭಾಗ್ಯದ ಬಾಗಿಲು ತೆರೆಯಲಿ..
ಅವಕಾಶಗಳ ಮಹಾಪೂರ
ಹರಿದರಿದು ಬರಲಿ..!
ನಿರಾಶೆಗೆಡೆಕೊಡದೆ
ಸಾಗಬೇಕು ಮುಂದೆ
ಗೆಲುವು ಕೈಹಿಡಿದು
ನಡೆಸುವುದು  ಮುಂದೆ..!
ಉದಿಸಿರಲು  ಮನದೊಳಗೆ
ಹಿಂಜರಿಕೆಯ  ಭಾವ
ತಲುಪಲಾಗದು ಗುರಿಯೆಡೆಗೆ
ಭಾವನೆಗಳಿಗೆ  ಅಭಾವ..!
ಎಲ್ಲ ತಡೆಗಳ ಮೀರಿ
ಸಾಗಬೇಕು ಮುಂದೆ
ಕಷ್ಟಗಳನು ದಾಟಿ
ನಡೆದರದು ಗೆಲುವೇ..!
ಬಾಳಹಾದಿಯಲುಂಟು
ಸಂಕಟಗಳ ಮುಳ್ಳು
ಸರಿಸಿ ಹೆಜ್ಜೆಯನಿರಿಸು
ಸುಗಮವಾಗಲಿ ಬಾಳು...!!

          ಶೈಲೂ......

Comments