85. ಬರೆಯಬೇಕು
ಬರೆಯಬೇಕು
ಬರೆಯಬೇಕು
ಏನಾದರೂ ಸರಿ
ಅರ್ಥಪೂರ್ಣವಾಗಿ
ಬೆಸೆಯಬೇಕು ಬಂಧ
ಹೇಗಾದರೂ ಸರಿ
ಮನಃಪೂರ್ವಕ ವಾಗಿ
ಪ್ರೀತಿ ಪದಗಳ ತುಂಬಿ
ಭಾವಿಸಬೇಕು
ಭಾವುಕ ಪದಗಳಲ್ಲಿ
ಪ್ರೀತಿ ತುಂಬಿರಬೇಕು
ಪದಗಳೊಳಗಡಗಿಹ ಭಾವ
ಪ್ರೀತಿಸುವಂತಿರಬೇಕು
ಭ್ರಮನಿರಸನವ
ಬಿಡಿಸುವಂತಿರಬೇಕು
ಬಾಳ ಕಹಿನೆನಪ
ಝಾಡಿಸಿ ಒಗೆಯಬೇಕು
ಮನದ ಮಲ್ಲಿಗೆಯು
ಅರಳಿ ನಗುತಿರಬೇಕು
ಬದುಕ ದಾರಿಯಲದುವೆ
ಬೆಳಕಾಗಬೇಕು
ಬಾಳಪಯಣದಲಿ
ಆಸೆ ಮೂಡಿಸಬೇಕು
ಕಂಡಿದ್ದ ಗುರಿಯೆಡೆಗೆ
ಧಾವಿಸಲು ಬೇಕು
ಕಹಿನೆನಪ ಕರಗಿಸಿ
ನಗುವ ಮೂಡಿಸಬೇಕು
ನಗುವರಳಿ ಜೀವನವು
ಸಾರ್ಥಕತೆಯ ಪಡೆಯಬೇಕು...
ಶೈಲೂ.....😊
Comments
Post a Comment