83. ಮುನಿಸೆಕೆ ಮಾಧವ

ಮುನಿ ಸೇಕೆ  ಮಾಧವ
******************

ಮುನಿಸೇ ಕೆ
ಮಾಧವಾ
ಮನ್ನಿಸು ಎನ್ನ
ಮರೆಯಲಾರೆನಾ
ಮಧುರ ಸ್ನೇಹವನ್ನ
ಮಾಧುರ್ಯ ಭರಿತ
ಮೃದು ನುಡಿಯನ್ನ
ಮರೆಯಲಿ ನಾ ಹೇಗೇಳು
ಮೌನವಾಗಿರಬೇಡ
ಮುನಿಸುತೋರಲು ಬೇಡ
ಮನದ ಮಂದಾರವದು
ಮುದುಡಿಹೋಗುವುದು
ಮನಸು  ನಿಲ್ಲದು
ಮಧುರ ನುಡಿ  ಆಲಿಸದೆ
ಮಂಕಾಗುವುದೆನ್ನ
ಮನ, ನಿನ್ನ  ನಗುವು  ಕಾಣದೆ
ಮಂದಹಾಸವ  ಬೀರು
ಮನದ ಮಲ್ಲಿಗೆಯು
ಮುತ್ತಾಗಿ  ಹೊಳೆಯುವುದು
ಮತ್ತೆ  ಹೊತ್ತು ಗೊತ್ತಿಲ್ಲದೆ
ಮುಕ್ತವಾಗಿ  ಅರಳುವುದು
ಮುಗುಳ್ನಗೆಯ  ಬೀರಿ......

   ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ