82.ಆಸೆ

---:  ಆಸೆ  :---
*****************

ನೀಲಿಯಾಗಸದಲ್ಲಿ  ಸ್ವಚ್ಛಂದವಾಗಿ
ಹಕ್ಕಿಗಳ ತೆರದಿ ಹಾರಾಡುವಾ  ಆಸೆ
ಮುಟ್ಟಿ  ಚುಕ್ಕಿ  ಚಂದ್ರಮರ  ಸಂಭ್ರಮಿಸಿ
ಅವರಂತೆಯೇ.ಮಿನುಗುತ್ತಿರುವಾಸೆ
ಕರಿಮೋಡದಲೆ ಸರಿಸಿ ಕತ್ತಲೆಯ ಭಯಬಿಡಿಸಿ
ಸುಂದರ ಬೆಳ್ಳಿ ಮೋಡದ ನಡುವೆ  ತೇಲುವಾಸೆ
ಬಿಳಿ ಮುಗಿಲ ಮಧ್ಯದಲಿ ಚುಕ್ಕಿ 
ರಂಗೋಲಿ ಯಿಟ್ಟಂತೆ ಅಲ್ಲಲ್ಲಿ 
ಮಿನುಗುವ  ಬಂಗಾರದೆಳೆ
ರವಿಕಿರಣ  ನಾನಾಗುವಾಸೆ
ತರಗೆಲೆಯು ತಿರುತಿರುಗಿ
ಧೂಳಿನಾ ಮಧ್ಯದಲಿ ಕಾಣದೂರಿಗೆ ಅಟ್ಟುವಾ ಬಿರುಗಾಳಿಯನು  ಸರಿಸಿ
ತಂಗಾಳಿ ನಾನಾಗಿ ತಂಪೆರವಾ ಆಸೆ
ಸಂತಸದಿ ತಲೆದೂಗಿ ಮರಗಿಡದ ಚಿಗುರೆಲೆಯು ಸಂಭ್ರಮದಿ ಪಿಸುಗುಟ್ಟಿ  ಮೌನ ಭೇಧಿಸುವ
ಮಂದಾನಿಲ ನಾನಾಗುವಾಸೆ
ಪ್ರಖರತೆಯ  ದೃಷ್ಟಿಯಲಿ ಬಡಿದು  ಭಸ್ಮಮಾಡುವಾ
ರೌದ್ರತೆಯ ಮಾರ್ತಾಂಡನಾ ರಮಿಸಿ ಮುದಗೊಳಿಸಿ
ರಮ್ಯತೆಯ ತೇಜಸ್ಸು ನಾನಾಗುವಾಸೆ
ಬಿಳಿಮುಗಿಲ ತೊಟ್ಟಿಲಲಿ ಚುಕ್ಕಿಗಳ ಜೊತೆ
ಚಕ್ಕಂದವಾಡುತ ಮಲಗಿರುವ
ಚಂದ್ರಮನ ತೂಗಿ ಲಾಲಿಹಾಡುವಾಸೆ
ಮೋಡಗಳ ಮರೆಯಲ್ಲಿ ಇಣುಕಿ
 ಹಾಗೊಮ್ಮೆ ಹೀಗೊಮ್ಮೆ  ನಕ್ಕು
ಮುಗುಳ್ನಗೆಯ ಬೀರುವಾ ಚಂದಿರನ
ಶೀತಲ ಕಿರಣ ನಾನಾಗುವಾಸೆ
ನುಗ್ಗಿ ಮನದಲಿ ಬಡಿದೆಬ್ಬಿಸಿ ಭಾವಗಳ
ಕನಸು ಮೂಡಿಸಿ ಮನದಾಳದಲ್ಲಿ
ಹುಲುಸಾಗಿ ಬೆಳೆಯುವ ಕಳೆಯಂದದಿ  ಆಸೆಗಳು
ಚುವುಟಿದರೂ ಮತ್ತೆ ತಲೆಯೆತ್ತಿ ನಿಲ್ಲುವುದು
ಆಸೆಗಳಿಗೇನು ??  ತೆರಕೊಡಬೇಕೇನು ??
ರೀತಿ ರಿವಾಜುಗಲಿಲ್ಲದಕೆ
ಸುಳಿಗಾಳಿಯಂತೆ  ಬೀಸಿ ಎತ್ತೆಂದರತ್ತತ್ತ
ಚದುರಿಸುತಿಹುದು  ಭಾವನೆಗಳ ಬಿಚ್ಚಿ

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ