78. ಮನೋಮೂರುತಿಗೆ

ಮನೋ ಮೂರುತಿಗೆ
*****************

ಮರೆತು  ಜೀವಿಸಬಹುದೇ
ಮಾಧವನೆ ನಿನ್ನ
ಮೋಹಕ ಚೆಲುವಿನ
ಮೋಹನ ನಿನ್ನ
ಮನದಲ್ಲಿ
ಮನೆಮಾಡಿ
ಮುದದಿ
ಮಲಗಿರುವೆ
ಮರೆಯಲಿ ನಾ ಹೇಗೆ
ಮನದ  ವೀಣೆಯ
ಮಧುರ.ರಾಗದಲ್ಲಿ
ಮೀಟುತಿಹ
ಮುರವೈರಿ
ಮರೆತೆಂತು ಜೀವಿಸಲಿ
ಮೋಹಪಾಶದಿ ಎನ್ನ
ಮುದದಿ  ಬಂಧಿಸಿರುವೆ
ಮರೆತಾದರೂ ಸರಿ
ಮುರಿಯಲಾಗದು ಬಂಧ
ಮನತುಂಬಿ ಬರುತಿದೆ
ಮಡುವುಗಟ್ಟಿದೆ ದುಃಖ
ಮನದನ್ನ  ಬಾ ಬೇಗ
ಮೂಡಿಸು
ಮುಗುಳ್ನಗೆಯ
ಮನದಲಿಟ್ಟು ಪೂಜಿಸುವೆ
ಮಾಸಿ ಜೀವನವು
ಮರಣಿಸಿ
ಮಸಣ  ಸೇರುವ ತನಕ

            ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ