74.ನಿನ್ನ ನೆನಪು

ನಿನ್ನ  ನೆನಪು
**********

ತಂಪಾದ ಗಾಳಿ
ಬೀಸುವ ಸಮಯದಲಿ
ಹನಿ ಹನಿಯ ಸೋನೆಮಳೆ
ಸುರಿದು ಹೊಳೆಯಾಗುವಲ್ಲಿ
ನನ್ನೆದೆಯ  ಸವಿಮಾತು
ಕವಿತೆಯಾಗೋ ವೇಳೆಯಲಿ
ನಿನ್ನ ನೆನೆವೆ..ನಾ.. ನಿನ್ನ ನೆನೆವೆ

ಇಂಪಾದ  ಸಂಗೀತ
ರಾಗದಲೆ  ಹೊಮ್ಮುವಲ್ಲಿ
ಕೋಕಿಲದ  ಇಂಪಾದ
ಕುಹೂ.. ಸಖೀಗೀತದಲ್ಲಿ
ಸುಶ್ರಾವ್ಯ ಗಾನಕೆನ್ನ
ಕೊರಳ ದನಿ ಸೇರುವಲ್ಲಿ
ನಿನ್ನ ನೆನೆವೆ.. ನಾ.. ನಿನ್ನ ನೆನೆವೆ

ಛಾವಣಿಯಿಂದಿಳಿವ
ಮಳೆಹನಿಯ ಧಾರೆಯಲಿ
ಮಳೆಹನಿಗೆ ಮುಖವೊಡ್ಡಿ
ನಾ ನಲಿವ  ಘಳಿಗೆಯಲಿ
ಕಾಲ್ಗೆಜ್ಜೆಯುಲಿತದ
ಘಲಿರು ಘಲಿರು ನಾದದಲಿ
ನಿನ್ನ ನೆನೆವೆ.. ನಾ.. ನಿನ್ನ ನೆನೆವೆ

ಮುಂಜಾವಿನ ವೇಳೆಯಲಿ
ಉದಯರವಿಯ ಕಿರಣದಲಿ
ಹಸಿರು ತರುಲತೆ ಗಳು
ತೂಗಿ ನಲಿವ ಸಮಯದಲಿ
ಮನದ ಮೊಗ್ಗು ಬಿರಿದು
ಹೂವಾಗಿ ಘಮಿಸುವಲ್ಲಿ
ನಿನ್ನ ನೆನೆವೆ..ನಾ.. ನಿನ್ನ ನೆನೆವೆ

            ಶೈಲೂ......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು