73.#ನೆನಪಿನಂಗಳದಿ #ನಡಿಗೆ

#ನೆನಪಿನಂಗಳದಿ #ನಡಿಗೆ
*********************
ನೆನಪಿನಂಗಳದಿ ನಡಿಗೆ
ಹೆಜ್ಜೆ ಹಾಕುತ ಒಳ ದನಿಗೆ
ಕನಸು ಕಾಣುತ ನಾಳೆಗೆ
ನಸು ನಗುವ ಮನದೊಳಗೆ

ಲಗ್ಗೆ ಹಾಕಿದೆ  ನಿನ್ನ ನೆನಪು
ಹೃದಯ ಮಂದಿರದ ಕಡೆಗೆ
ಬಿಡಿಸಿಕೊಳ್ಳಲಾಗದಲ್ಲ
ಬಂಧಿಯಾದೆ ಅದರೊಳಗೆ

ಕಚಗುಳಿಯಿಟ್ಟಂತೆ ಭಾಸ
ನಿನ್ನ ಮೋಡಿಯ ಸುಹಾಸ
ಕಣ್ಣ ತುಂಬೆಲ್ಲ ಬಿತ್ತರ
ನಿನ್ನಂದದ ಚಿತ್ತಾರ

ಮುಂಗುರುಳಲ್ಲಾಡಿದಂತೆ ಬೆರಳು
ಆವರಿಸಿತ್ತೇ ಆ ನಿನ್ನ ನೆರಳು
ಝಲ್ಲೆಂದಿತ್ತು  ಕ್ಷಣ ಹೃದಯ
ಈ  ತಲ್ಲಣವೇಕೆ ಗೆಳೆಯಾ

ಮುಸ್ಸಂಜೆ ರವಿ ಮುಳುಗುವ ಹೊತ್ತು
ಬರುವೆಯೆಂದು ಹೃದಯಕೂ ಗೊತ್ತು
ಏನೋ ತಲ್ಲಣ ನವಿರಾದ ಕಂಪನ
ನೆನೆದರೊಮ್ಮೆಗೇ ರೋಮಾಂಚನ

ನಡೆವ ನಿನ್ಹೆಜ್ಜೆಯ ಸದ್ದು ಮೊಳಗಿ
ಎದೆಯೊಳಗೆ ಬಡಿತದ ಸದ್ದು ಗುಡುಗಿ
ಮೈಮನವೆಲ್ಲಾ ಹಿತವಾದ ಕಂಪನ
ನಿನ್ನೀನೆನಪೇ ಸೋನೆ ಮಳೆಯ ಸಿಂಚನ

ಮಧುರ ಭಾವವು ಮುನ್ನುಗ್ಗಿ ಮನಕೆ
ನಸುನಗೆಯ ಲಾಸ್ಯ ತುಂಬಿತ್ತು ತುಟಿಗೆ
ಕಣ್ಣಲಿರಿಸಿ ನಿನ್ನಂದದ ಚಿತ್ರ
ವಾಲಿದೆ ಮನಸು ನಿನ್ನ.ಸುತ್ತ ಮುತ್ತ

            ಶೈಲೂ....
Dr : Shylaja Ramesh

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ