72.ಜೀವಜಲಕಾಗಿ ಪರದಾಟ



ಜೀವಜಲಕಾಗಿ ಪರದಾಟ
********************
ಭುವಿಯೊಡಲು ಬತ್ತಿ ಬಾಯ್ಬಿಟ್ಟಿದೆ
ಹನಿನೀರ ಕಾಣದೆ ಜೀವಸಂಕುಲ ನಲುಗಿದೆ
ಕೆರೆಕಟ್ಟೆ ನದಿ ಹಳ್ಳ ಬರಿದಾಗಿದೆ
ಗುಟುಕು ನೀಡಲು ವರುಣ ಬರಬಾರದೆ?

ಪಾತಾಳ ಕಂಡಿದೆ ಅಂತರ್ಜಲಮಟ್ಟ
ಲಾವಾರಸ ಉಗುಳಿದೆ ಗಿರಿಬೆಟ್ಟ
ತಲ್ಲಣಿಸುತ್ತಿದೆ ಸಂಕುಲದ ಬದುಕು
ನಿತ್ಯ ನರಳಾಟ ನೀರಿಗೆ ಸಿಗಲಿಲ್ಲವೇ ಗುಟುಕು

ಎಲ್ಲೆಲ್ಲೂ ನೀರಿಗಾಗಿ ಹಾಹಾಕಾರ
ಭೂಮಿ ಬಗೆದರೂ ಹನಿ ನೀರಿಗೆ ತತ್ವಾರ
ಉಳ್ಳವರು ಬೆಲೆಕಟ್ಟಿ ಕೊಳ್ಳುವರು
ಉಳಿದವರು ನೀರಿಗಾಗಿ ಅಲೆಯುವರು

ಪ್ರಾಣಿ ಪಕ್ಷಿಗಳದು ಗೋಳು ಪರದಾಟ
ಬತ್ತಿದ ನಲ್ಲಿಯಲಿ ನೀರ ಹುಡುಕಾಟ
ಉಸಿರಹಿಡಿಯಲು ಜೀವಜಲ ಬೇಕು
ಕಾಳಿಲ್ಲದಿದ್ದರೂ ಕುಡಿಯುವ ನೀರಿರಬೇಕು

ಮನುಜ ಕರುಣವಿರಲಿ ಸ್ವಲ್ಪ
ಬಟ್ಟಲಲಿ ನೀರಿಟ್ಟಿದ್ದರೆ ಅಲ್ಪ
ಬಾಯಾರಿ ಬಳಲಿದ ಹಕ್ಕಿಗೊಂದು ಗುಟುಕು
ಹೆಚ್ಚಿ ಪುಣ್ಯಫಲ ಹಸನಾಗುವುದು ಬದುಕು

           ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ