71. ಕಣ್ಣೀರು

ಕಣ್ಣೀರು
*******
ನವ ಚೈತನ್ಯವನುಕ್ಕಿಸುವ
ಸ್ಫೂರ್ತಿಸೆಲೆ ನೀನಾಗಲೆಂದು
ಬಯಸಿದ್ದೆ ನಾನು
ಒಡಲಾಳದಿ ಹುದುಗಿದ್ದ
ನೋವಿನಲೆಯ ಸುನಾಮಿ
ಏಕಾದೆ ನೀನು..?

ಸಂತಸದಿ ಗುನುಗುವ
ಸವಿಯ ಮೋಹನರಾಗ
ನೀನಾಗೆಂದು ಬಯಸಿದ್ದೆ ನಾನು
ನೆನಪಿನನಂತ ಶರಧಿಯಲಿ
ಬಂದಪ್ಪಳಿಸಿದ  ವಿಷಾದದ
ಶೋಕಗೀತೆ ಯಾಕಾದೆ ನೀನು.?

ಅಂತರಂಗವನನುಸರಿಸಿ
ಭಾವನೆಗಳ ಮುದ್ದಿಸುವ
ಚೇತನವಾಗಲೆಂದೆಣಿಸಿದ್ದೆ ನಾನು
ಧಿಕ್ಕರಿಸಿ ಮನದ ಮಾತುಗಳ
ಅವ್ಯಕ್ತ ನೋವಲಿ ಕಾಡಿ
ತುಳುಕಿಸುವ ಕಣ್ಣೀರೆಕಾದೆ ನೀನು

           ಶೈಲೂ....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು