69..ನಾನೆಂತು ಅರಿಯಲಿ

ನಾನೆಂತು ಅರಿಯಲಿ
*****************

ನೀನೊಲಿಯದೇ ನಾನೆಂತು ಅರಿಯಲೀ ನನ್ನ
ಅರಿಯಲಾದೀತೇ ತೆರೆಯದೆ ಅರಿವಿನ ಕಣ್ಣ  ||

ಬರಿದೇ ಆಸೆಗಳ ನಿಧಿಯ ಹುದುಗಿಟ್ಟ ನಿಕ್ಷೇಪ
ಸೆರೆಯಾಯ್ತು ಮನವಲ್ಲೇ ಬರಿದೇ ಒಣ ಪ್ರತಾಪ
ಹೊರಬರಲಾರದೇ ಹಾದಿಯನು ನಾನರಿಯೆ
ನಡೆಸು ಬಾ ಕೈಹಿಡಿದು ದಾರಿಗಳ ತೆರೆಯೇ  ||

ಗೂಢ ನಿಗೂಢಗಳಲಿ ಸುತ್ತಿ ಆಸೆಯ ಬಳ್ಳಿ
ಸೋಕಿದೆಡೆಯೆಲ್ಲೆಲ್ಲಾ ಹುಣ್ಣೆಬ್ಬಿಸುವಾ ಕಳ್ಳಿ
ತೊಡೆ ಕಿಚ್ಚೆಬ್ಬಿಸುವಾ ಮಲಿನ ಮಲ ದುರ್ಗಂಧ
ಸಂಗಮಿಸು ಒಪ್ಪುವಾ ಎಲ್ಲ ಹೂ ಮಕರಂದ  ||

ತೊಳೆ ಅಂತರಂಗದ ಜಡ ಚೇತನದ ಕರಿನೆರಳು
ಪೊರೆ ಬಾಂಧವನೆ ನೀನೆನ್ನ ಹಿಡಿದು ಕೈಬೆರಳು
ನೀನಿತ್ತ ಪಾತ್ರದಲಿ ತಪ್ಪಿಲ್ಲದ ನಡೆಯಂತೆ
ಅರಿವು ಮೂಡಿಸು ಬಾ ಬೆಳಕೇ ತಮ ಕಳೆವ ಪ್ರಭೆಯಂತೆ. ||

            ಶೈಲೂ......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ