65. ಹಸಿವು


" ಎಸೆಯದಿರಿ ತುತ್ತು ತುಂಬುವುದು ಒಂದು ಹೊತ್ತು"

ಹಸಿದವನಿಗೆ ಗೊತ್ತು
ಅನ್ನದ ಕಿಮ್ಮತ್ತು
ಹೊಟ್ಟೆತುಂಬಿದವನಿಗೇನು ಗೊತ್ತು
ತೋರಿಸುವನು ಗತ್ತು

ಒಂದ್ಹೊತ್ತಿನ ಹಿಡಿತುತ್ತಿಗೂ
ಗತಿಯಿಲ್ಲದ ಜನರಿಹರು
ಮೈಮುರಿದು ದುಡಿದರೂ
ಸುರಿಸಿ ಮೈಬೆವರು

ಒಂದೊಂದು ಅಗುಳಿಗೂ
ಅದೆಷ್ಟು ಬೆವರಿತ್ತ ಗೊತ್ತಾ
ಸಂಕಷ್ಟದಲೂ ಉತ್ತುಬಿತ್ತು
ದವಸಧಾನ್ಯ ಬೆಳೆವ ರೈತ

ಬಿಸುಟುವುದರಲೇನಿಹುದು
ಹೆಗ್ಗಳಿಗೆ ಹೆಚ್ಚಳಿಕೆ
ಹಮ್ಮು ಬಿಮ್ಮು ಬಿಟ್ಟುಬಿಡು
ಮನುಜ ಬೇಡ ಮೂದಲಿಕೆ

ಹಣವಿಹುದೆಂದು ಚಿನ್ನ
ತೆನ್ನಲಾದೀತೆ ಹೇಳು?
ಹಸಿದೊಡಲಲ್ಲಿ ಬಳಲುತಿರೆ
ಹಿಡಿ ಅನ್ನವೇ ದೇವರು

ಹಮ್ಮಿನ  ಬಿಮ್ಮಿನಲ್ಲಿ 
ಎಸೆಯದಿರಿ ತುತ್ತನ್ನು
ತುಂಬುವುದು ಹೊಟ್ಟೆ 
ಭರಪೂರ ಒಂದು ಹೊತ್ತು

ಅನ್ನವೇ ಪರಬ್ರಹ್ಮ 
ಅನ್ನಗತ ಪ್ರಾಣ
ಹಸಿದಾಗ ಅನ್ನವಿಲ್ಲದಿರೆ
ಮನುಜ ನೀನಾಗುವೆ ನಿತ್ರಾಣ

         ಶೈಲೂ......

Comments

Popular posts from this blog

197 ತವರ ಸೆಳೆತ

330 ನಾ ಕಂಡ ಕನಸು

219 ಕದನ