45 ರಂಗಿನೊಕುಳಿ
" ಬೃಂದಾವನದ ತುಂಬೆಲ್ಲ ಹೋಳಿ ಸಂಭ್ರಮ "
🌹ರಂಗಿನೋಕುಳಿ🌹
********************
ಎಲ್ಲೆಲ್ಲಿ ನೋಡಲಿ ರಂಗಿನದೇ ಗುಂಗು
ರಂಗಿನೋಕುಳಿಯಲ್ಲಿ ರಂಗನದೇ ಮೆರುಗು
ಬಣ್ಣಬಣ್ಣಗಳ ಸುಗ್ಗಿ ಸುರಿವ ವರ್ಷಧಾರೆ
ಚೇತೋಹಾರೀ ಸಮಯ ನಿಲ್ಲದ ಹರ್ಷದಾರೆ
ಮೋಹಕ ಕೃಷ್ಣನ ಮೊಗದೇ ತುಂಟತನದ ರಂಗು
ಕಣ್ತಪ್ಪಿಸಿ ಓಡುವ ರಾಧೆಗೆ ಲಜ್ಜೆಯೇ ಸೊಬಗು
ಗೋಗರೆದರೂ ಬಿಡನಲ್ಲನಿವ ಓಕುಳಿಯ ಸಿಂಚನ
ನೆನೆದು ಹಿಗ್ಗಿದವಳಿಗೆ ತಂದಿತ್ತು ರೋಮಾಂಚನ
ಮೇಲಿಹುದು ತುಸುಕೋಪ ಲಜ್ಜೆಯಾಭಾರಣ
ಒಡಲಲ್ಲಿ ಬಯಸಿದೆ ಮಾಧವನ ಪ್ರೇಮಾಲಿಂಗನ
ಮೋಹವಲ್ಲದ ಪವಿತ್ರಪ್ರೇಮದ ಮಧುರಾಲಾಪನ
ರಂಗಿನೊಕುಳಿಯಲ್ಲಿ ಮಿಂದೆದ್ದು ರಾಸಾಸ್ವಾದನ
ಒಲಿದ ಮನಗಳೆರಡರ ಅನುರಾಗ ಸಂಗಮ
ಕಣ್ಣೋಟದಲ್ಲೇ ನುಡಿಸಿ ಸಂಗೀತ ಸರಿಗಮ
ಪಾವಿತ್ರ್ಯತೆಗೆ ಹೆಸರು ರಾಧಾಮಾಧವರ ಪ್ರೇಮ
ನೆನೆದಾಕ್ಷಣವೇ ವ್ಯಥೆಯ ತರಿದು ಬಿಸುಟುವ ಶ್ಯಾಮ
ಕನಸುಗಳಿಗೆ ಬಳಿದನಿನ ರಂಗುರಂಗಿನ ಬಣ್ಣ
ಭಾವಾoತರಂಗದಲಿ ತುಂಬಿ ಭಕ್ತಿಯ ಹೂರಣ
ಕಾಮನೆಗಳ ದಹನವೆ ಹೋಲಿಯ ನಿಜಾಂತರಂಗ
ಪ್ರೇಮಭಕ್ತಿಯೇ ತುಂಬಿರಲಿ ಅಂತರಂಗ ಬಹಿರಂಗ
ಬೃಂದಾವನದ ತುಂಬೆಲ್ಲ ಹೋಲಿಯ ಸಂಭ್ರಮ
ಗೋಪಿಯರ ನಡುವಲ್ಲಿವ ನಗುವ ಚಂದ್ರಮಾ
ಆಂತರ್ಯದ ತಮದ ಕೊಳೆ ಮಲಿನ ತೊಳೆಯುತ
ಸಿಂಪರಿಸುತಿರುವ ಜೀವಕೆ ಹೊಸರಂಗು ತುಂಬುತ
ಶೈಲೂ....
Comments
Post a Comment