249 ಮೌನ


ಮೌನ
*******

ಮಾತು ಮೌನವಾದಾಗ
ಮೌನವೇ ಮಾತು
ಮೌನದಲೇ ಗುನುಗಿದಾಗ
ಮೌನವೇ ರಾಗವು
ಮನ ಮುನಿಸಿನಲಿರಲು
ಮೌನವಾಯ್ತು ಮದ್ದು
ಮೌನದೇಕಾಂತವದು
ಮುಸುಕುನೊಳಗಿನ ಗುದ್ದು
ಮಾತು ಮರೆಯಾದಾಗ
ಮೌನ ದಾರಿದೀಪ
ಮೌನ ವಿಜೃಂಭಿಸಿದಾಗ
ಮಾತು ತೀರದ ತಾಪ
ಮಾತು ಒಂದು ನುಡಿದರೆ
ಮೌನಕೆ ನೂರರ್ಥ
ಮಾತಿಗೆ ಅರಿಯಲಾಗದು
ಮೌನದ ಭಾವಾರ್ಥ
ಮಾತು ಮನೆಯ ಕೆಡಿಸಿದರೆ
ಮೌನ ಬಾಳನುಳಿಸಿತು
ಮೌನವಾದರೆ ಬದುಕು
ಮಾತಿಗೆ ಅರ್ಥವೆಲ್ಲುಳಿಯಿತು..??

       ಶೈಲೂ....

Comments

Popular posts from this blog

197 ತವರ ಸೆಳೆತ

343 ಒಗಟಿನ ರೂಪದ.ಚುಟುಕು

353ಅಮ್ಮ