242 ಹುಣ್ಣಿಮೆ


ಹುಣ್ಣಿಮೆ ##
************

ಬಾನ ತುಂಬೆಲ್ಲ ಹೊಂಬೆಳಕ ಚೆಲ್ಲಿ ದಣಿದು ವಿಶ್ರಾಂತಿಯನರಸುತ ಭೂರಮೆಯ ತೆಕ್ಕೆಯಲಿ
ಮಲಗಲು ಮರೆಯಾದ ದಿನಕರ
ಕಾರ್ಗತ್ತಲ ಇರುಳಲ್ಲಿ ನಡುಗಿ ಬೆದರಿ
ಭಯಬೀತಾರಾಗದಿರಲೆಂದು ಮೋಡಗಳ
ತೆರೆಸರಿಸಿ ಮೆಲ್ಲನಿಣುಕಿದ ಚಂದಿರ

ಕತ್ತಲಾಗಿದ್ದ ಬಾನಲ್ಲಿ ಆವರಿಸಿದೆ
ಪಾಲ್ಗಡಲ ತೆರನಂತೆ ನೋಡು
ತುಂಬು ಚಂದಿರನ ತಿಂಗಳಿನ ಕಾಂತಿ
ಹುಣ್ಣಿಮೆ ಚಂದ್ರನ ಸುತ್ತ ನೆರೆಯಿತು
ಮಿಣುಕುದೀಪವಿಟ್ಟಂತೆ ಹೊಳೆಯುತ
ಅಗಣಿತ ತಾರಾಗಣಗಳ ಭ್ರಾಂತಿ

ಹುಣ್ಣಿಮೆ ಬೆಳದಿಂಗಳ ಕಾಂತಿಯಲಿ 
ನಲಿವ ಭೂರಮೆಗೂ ನವಿರಾದ
ತಲ್ಲಣದ ಸಂಭ್ರಮದ ಹೊನಲು
ಅಖಿಲ ಜೀವರಾಶಿಯಲೂ ಹಿತವಾದ ಕಂಪನ
ವಿರಹ ಬೇಗೆಯ  ಹರಿಸಲು
ಸುತ್ತೆಲ್ಲಾ ಹಾಳ್ಭೆಳಕು ಚೆಲ್ಲಿರಲು

ಸಾಗರಕೂ ಹುಣ್ಣಿಮೆಗೂ ಅದೆಂಥ ಅನುಬಂಧ
ಭೋರ್ಗರೆದು ತೆರೆಯಪ್ಪಳಿಸಿ ಅಪ್ಪುವಳು
ನೀಲ ನಭದ ಆ ಚಂದ್ರಮನಾ
ಸ್ಪುರಿಸಿ ಪ್ರೀತಿಯ ಬೆಳದಿಂಗಳ ಸುರಿಸಿ
ಪರಿತಪಿಸುವ ಅಲೆಯಬ್ಬರಕೆ ನೀಡುವ
ಚಂದಿರ ಉತ್ಕಟತೆಯಲಿ ಚುಂಬನ

ಮೆರೆದ ಚಂದ್ರಮ ದಿನದಿನ ಕ್ಷೀಣಿಸಿ
ಮರೆಯಾಗುವನೊಮ್ಮೆ ಕಾರ್ಗತ್ತಲಲಿ
ಇದು ಸಹಜದ ಪ್ರಕೃತಿ ನಿಯಮ
ಎತ್ತೆತ್ತರಕೆ ಬೆಳೆದರೂ ಮನುಜ
ಕೆಳಗಿಳಿಯಬೇಕು ಒಂದೊಮ್ಮೆ ತೋರದಿರು
ಅಹಂಕಾರ ಇರಲಿ ಸಂಯಮ

          ಶೈಲೂ.......

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು