241 ತಂಗಾಳಿ

ತಂಗಾಳಿ
*******

ತಂಗಾಳಿಯಂತೆ ನೀ ಬಂದೆ ಬಾಳಿಗೆ
ಅದಮ್ಯ ಬಯಕೆ ಕನಸು ಹೊತ್ತ ನಾಳೆಗೆ
ಚದುರಿಹೋಯಿತು ನೋವುಗಳ ಕಾರ್ಮೋಡ
ಬಿರಿದ ಮಲ್ಲಿಗೆಯಂತೆ ಮನ ಪ್ರಫುಲ್ಲವಾಯಿತು ನೋಡಾ

ನಿನ್ನ ನೆನಪಲ್ಲೇ ನಾ ಕಂಡಿದ್ದೆ
ಕಣ್ಣಂಚಲಿ ಸಿಹಿಕನಸುಗಳು
ಆ ಕನಸಿನಲೆಯಲ್ಲೇ ಪ್ರತಿಕ್ಷಣವೂ
ಕಾಡುವ ನಿನ್ನ ಸವಿ ನೆನಪುಗಳು

ಅದಾವ ಜನ್ಮದ ಪುಣ್ಯದ  ಫಲವೋ
ನಿನ್ನ ಪ್ರೇಮದ ಸಗ್ಗವ ನಾ ಪಡೆಯಲು
ತಂಪೆರಲಿನಂತೆ ಬಂದೆ ಬಾಳಿಗೆ
ಹರಿಸಿ ಜೇನ ಪ್ರೀತಿಯ ಹೊನಲು

ನನ್ನೆಲ್ಲಾ ನೋವ ಭಾರ ಇಳಿಸಿ
ಪ್ರತಿ ಕ್ಷಣಕ್ಷಣವ ಮೀಸಲಿಡುವೆ ನಿನನಾಗಿ
ತಂಗಾಳಿಗಿಂತಲೂ ಸೊಂಪು ಗೆಳೆಯಾ
ನೀ ತೋರುವ ಪ್ರೀತಿ ನನಗಾಗಿ

        ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ