240 ಕತ್ತಲೆ

ಕತ್ತಲೆ
*****
ನಿನ್ನ ಹುಸಿಮುನಿಸು ಕಹಿಮಾತು
ಕತ್ತಲೆ ಎನ್ನಬಾಳಿಗೆ ಬಾಳಗೆಳೆಯ
ನಗುವಿಲ್ಲದಾ ಮೊಗವು ಸೊಗವಿಲ್ಲದಾ ಸರಸ
ಕವಿದ ಕಾರ್ಗತ್ತಲಿರುಳಿಗೆ ಸಮ

ಕಡೆಗಣ್ಣಿನಾ ನೋಟ ಮನಹಿಂಡುವ ಮೌನ
ಕತ್ತಲೆ ಎನ್ನ ಬಾಳಿಗೆ ಬಾಳ ಗೆಳೆಯ
ನೀನಿರದಾ ಬಾಳು ಬರೀ ನೀರವ ಬೇಸರ
ಸಾವಿನರಮನೆಯ ಶೃಂಗಾರಕೆ ಸಮ

ಭಾವನೆಗಳ ಮೇಲೆಯೇ ನಿಂತಿದೆ ಬದುಕು
ನಿರ್ಭಾವುಕನಾದರೆ ಕತ್ತಲೆಯೇ ಎಲ್ಲಾ
ಬದುಕು ಭರವಸೆಯಾಗಿಸು ಬಾರಾ
ನಿನ್ನೊಡನಾಟ ಸಗ್ಗದ ಸಿರಿಗೆ ಸಮ

ಬದುಕು ಶಾಶ್ವತವಲ್ಲ ನೀರ ಮೇಲಿನ ಗುಳ್ಳೆ
ನೀನೊಲಿಯದಿರೆ ಚಂದವಿಹುದೇ ಹೇಳು?
ನಗುವ ಮೊಗದ  ಸೊಗದ ಸೊಗಡು
ಬೆಳದಿಂಗಳ ಚಂದ್ರಮನಾ ಕಾಂತಿಗೆ ಸಮ

ಕಾರಿರುಳ ರಾತ್ರಿಯಲಿ ಅರಿಯದ ಹಾದಿ
ಒಬ್ಬಂಟಿ ಯಾತ್ರಿ ನಾನಾದೆನಲ್ಲ
ಕೇಳಿಸದೇ ಕರೆಯು ಎದೆಯಾಳದ ಮೊರೆತ
ನಗೆಯ ದೀವಟಿಗೆ ಹಿಡಿದು ಬಾ ಗೆಳೆಯಾ

ಕರುಳು ಕನವರಿಸುತಿಹುದು ನಿನ್ನದೇ ಹೆಸರ
ಹೊಂಗನಸು ಮೂಡಿಸು ಬಾ ಬಾಳಿನಲಿ
ಕಾತರಿಸಿ ಕರೆಯುತಿಹೆ  ನಡುಕದಲಿ ನೋಡು
ಕತ್ತಲೆಯ ಸೀಳಿ ಬೆಳಕಾಗು ಬಾ ಬಾಳಿಗೆ ಗೆಳೆಯಾ

          ಶೈಲೂ.....

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು