239 ಸಾಹಿತ್ಯೋತ್ಸವ

ನಮಸ್ತೇ ಸ್ನೇಹಿತರೇ🙏🙏
ಸಾಹಿತ್ಯೋತ್ಸವದ ವಾರ್ಷಿಕೋತ್ಸವದ ಶುಭಾಷಯಗಳನ್ನು ತಿಳಿಸುತ್ತಾ....
ನನ್ನೊಂದು ಪುಟ್ಟ ಕವನ ಸಾಹಿತ್ಯೋತ್ಸವದ ಬಗ್ಗೆ😊

""ಸಾಹಿತ್ಯೋತ್ಸವ""
  *************

ಕನ್ನಡದ ಸಾಹಿತ್ಯೋತ್ಸವ ಗುಂಪು
ಬೀರಿದೆ ಎಲ್ಲರ ಮನದೆ ಉತ್ಸಾಹದ ಕಂಪು
ಹುರಿದುಂಬಿಸುವ ಪ್ರೋತ್ಸಾಹದ ಸೊಂಪು
ಸದಸ್ಯರಲ್ಲಿ ಸಮಾಧಾನದ ಗಾನದಿಂಪು

ವಿವಿಧ ವಿನೂತನ ಚಟುವಟಿಕೆಗಳ
ಉತ್ಕರ್ಷದೆ ಹರಿಸುತ್ತಿದೆ  ಸಾಹಿತ್ಯ ..ಸುಧೆ..!!
ಇದ ಉಳಿಸಿ ಬೆಳೆಸುವ ಹೊಣೆ ನಮ್ಮದೇ
ನಳನಳಿಸಲಿ ಉಸಿರುಳಿಸುವ ಹಸಿರಿನಂದದೆ

ನಿರ್ವಾಹಕರ ನಲ್ಮೆಯ ಆರೈಕೆಯಲಿ
ಸದಸ್ಯರ ಉತ್ಸಾಹದ ಹಾರೈಕೆಯಲಿ
ತಂಪೀಯುವ ಈ  ಬಳಗ ನಮ್ಮದೇ
ನಿತ್ಯ ಹೊಳೆಯಲಿ ಉದಯ ರವಿಯ ಕಾಂತಿಯಂದದೆ.....

                  ಶೈಲೂ......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ