238 ಉಲ್ಲಾಸ

🌹ಉಲ್ಲಾಸ🌹
*************

ಉಲ್ಲಾಸ ಉತ್ಸಾಹ ನಿನ್ನಿಂದ ತಾನೇ ಗೆಳೆಯ
ಹರುಷ ತುಂಬಿ ಬಾಳಿಗೆ ಬೆಳಗಿದೆ ನನ್ನ ಹೃದಯ
ಕಮರಿದ್ದ ಬಾಳಿಗೆ ಬೆಳ್ಳಿ ಬೆಳಕಂತೆ ಬಂದೆ
ನೋವುಂದ ಬದುಕಿಗೆ ಮನೋಲ್ಲಾಸ ತಂದೆ

ಕಂಡಿದ್ದ ಕನಸೆಲ್ಲ ಕಮರಿ ಕಂದರ ಸೇರಿದಾಗ
ಕೈಹಿದು ಮೇಲೆತ್ತಿ ಸಂತೈಸಿ ನೀಡಿದೆ ಅನುರಾಗ
ಬಾಳ ಪಯಣದಲ್ಲಿ ಒಂಟಿ ಭಾವ ಕಾದಡಂತೆ
ಜೊತೆಯಿರಿಸಿ ಹೆಜ್ಜೆ ಜೀವನೋತ್ಸಾಹ ತಂದೆ

ಮುದುಡಿದ ಮನವ ರಮಿಸಿ ಸಂತೈಸಿ ತಾಯಾದೆ
ನಿನ್ನೊಡನಾಟದ ನವಿರು ಉಲ್ಲಾಸದಲಿ ನಾ ಹಣ್ಣಾದೆ
ನಲಿವಿನಲಿ ಭರವಸೆ ತುಂಬಿದ ಬಾಳ ಬೆಳಕು ನೀನು
ಆರಾಧಿಸುವ ದಿವ್ಯ ಮೂರ್ತಿ ನೀ ಎನಗೆ ದೈವವಲ್ಲವೇನು?

ಕಂಡ ಕನಸೆಲ್ಲ ಸಾಕಾರ ನಿನ್ನೊಲವ ಒಡನಾಟದಿಂದ
ಅರ್ಪಿಸುವೆ ನಾ ಧನ್ಯವಾದ ತುಂಬು ಹೃದಯದಿಂದ
ಉತ್ಸಾಹ ತುಂಬಿ ಉಲ್ಲಾಸ ತಂದ  ಓ ಗೆಳೆಯಾ
ಹೃದಯದಾಸನ ನಿನಗೆಂದೇ ಮೀಸಲಿಟ್ಟೆ ಬಾ ಒಡೆಯಾ...

             ಶೈಲೂ.......

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ