228 ದಾರಿ ಕಾಯುತ ನಿಂತೆ

ದಾರಿ ಕಾಯುತ ನಿಂತೆ
*******************

ದಾರಿಕಾಯುತಿರುವೆ ನಲ್ಲ
ಇನ್ನೂ ನೀ ಏಕೆ ಬರಲಿಲ್ಲ
ಕನಸುಗಳ ಬೆನ್ನತ್ತಿ ನಿಂತೆ
ನೆನಪುಗಳ ಭಾರಕೆ ಸೋತೆ

ಮನದೊಳು ಅಳತೆ ಮೀರಿದ
ಭಾವಗಳ  ಆಂದೋಳನ
ಮನತುಂಬಿ ಓಡಿ ಬರುವ
ನೆನಪುಗಳ  ಸಮ್ಮಿಲನ

ಅನುರಾಗದ ಹೊಳೆಯಲ್ಲಿ
ಕೊಚ್ಚಿಹೋದ ಆ ಘಳಿಗೆ
ಬಿಡದೆ ಕಾಡುವ ಕನಸುಕಂಗಳ
ತುಂಬಾ ಭಾವಬಿಂಬದ ಮಳಿಗೆ

ಬಿಡದೆ ಭೋರ್ಗರೆವ ನಿನ್ನ
ಭಾವದಲೆಯಲಿ ಕೊಚ್ಚಿಹೋಗಿ
ಹಂಬಲಿಕೆ ಬಲವಾಯ್ತು
ಬರಲಿಲ್ಲೇಕಿನ್ನುನನ್ನ ಹೆಸರು ಕೂಗಿ

ಸಾವಿರ ಕನಸಿಗೆ ರಂಗು ಬಳಿದು
ಕಾದಿರುವೆ ನಿನಗಾಗಿ ಅಂಗಳದಲಿ
ಮಳೆಯಾಗಿ ಹನಿಸಿ ಕಾರ್ಮೋಡ ಕರಗಿ
ಕಾಣಲು ತವಕಿಸುತ್ತಿರುವೆ ಗೋಡೆಗೊರಗಿ

             ಶೈಲೂ.....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ