226 ವಿನಾಶದೆಡೆಗೆ

ವಿನಾಶದೆಡೆಗೆ
************

ಅತಿರಭಸದಿ ಮುನ್ನುಗ್ಗುತ್ತಿದೆ
ಭೋರ್ಗರೆದು ಬರಸೆಳೆದು
ತುರುಕಿಸಿ ಗರ್ಭದೊಳಗೆ
ಸಾಗುತ್ತಿದೆ  ಅಗೋಚರದೆಡೆಗೆ

ಸೆಣೆಸಿ ಉಳಿದವರಿಲ್ಲ
ಇದರ ಹರಿವಿನೊಂದಿಗೆ
ಸಾಗಿ  ಅರಿತವರಿಲ್ಲ
ಅದರ  ಮೂಲದೊಳಗೆ

ಸಿಕ್ಕವರ ಬಡಿದೆಳೆದು
ಹೆಡೆಮುರಿಯ ಕಟ್ಟಿ
ಸಾಗುತ್ತಿದೆ ಗಮ್ಯದೆಡೆಗೆ
ತೋರುತ್ತಿದೆ  ವಿನಾಶ

ರಭಸದ ಹರಿವಿಗೆ  ಸಿಕ್ಕು
ಸೆಳೆವ  ಅಲೆಗಳ  ಹೊಕ್ಕು
ರುದ್ರರಮಣೀಯ ಚೆಲುವ
ಅರುಹಲು ಉಳಿದಿಲ್ಲ ಯಾರೂ

ಹೋಗದಿರಿ ಅದರ ದಡದೆಡೆಗೆ
ಸಾಗದಿರಿ ಅದರ ಜತೆಜತೆಗೆ
ಆಕ್ರಂದನವೇ ಅದರ ಒಡಲೊಳಗೆ
ಹೊತ್ತು ಒಯ್ಯುತ್ತಿದೆ ಜೀವನಾಂತ್ಯದ ಕಡೆಗೆ

             ಶೈಲೂ

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ