225 ಮಜ್ಜನದ ಸೊಗ

ಮಜ್ಜನದ  ಸೊಗ
*************

ನಿಸರ್ಗದ ಮಡಿಲಲ್ಲಿ ಮಜ್ಜನ
ಆಹಾ.. ಚಳಿಚಳಿಯ ಏಕತಾನ
ಬಿಸಿನೀರ ಹನಿ ಹನಿ.ಸಿಂಚನ
ಮೈಮೇಲೆ ಹನಿಲೀಲೆ ರೋಮಾಂಚನ

ನಡುಗಿಸುವ.ಚಳಿಯಿದೆ ಗೊತ್ತಾ
ಬರಿಮೈಯ ಕುಳಿರ್ಗಾಳಿ ನಡುಗಿಸುತ್ತಾ
ಬೇಡವೆನಿಸುತ್ತಿದೆ ಮಜ್ಜನ ಬಿಡು
ತಪ್ಪಿಸುಕೊಳ್ಳುತ್ತೇನೆಂದಾ ಕೈಹಿಡಿದದ್ದು

ತಪ್ಪಲೆಯಿಂದ  ಮೊಗೆಮೊಗೆದು
ಎತ್ತಿ.ಸುರಿಯುವ ಪರಿ ಸೊಗಸು
ತೋಳಿoದಿಳಿದಿಳಿದು ಜಲಧಾರೆ
ಅಮ್ಮಾ ರೋಮಾಂಚನವ.ತಡೆಯಲಾರೆ

ಈ ಬಯಲೇನೆ ಸ್ನಾನದ ಮನೆ
ಪ್ರಕೃತಿಮಡಿಲಲ್ಲಿ ಮಜ್ಜನ ಸೊಗವೇನೇ
ಹರಿವ ಹೊಳೆಯ ಸಲಿಲ ಜಲವಿದು
ಇನಿತೂ ಖರ್ಚಿಲ್ಲದ ಜಳಕದ ಕಥೆಯಿದು

            ಶೈಲೂ....

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ