224 ಬಾಂಧವ್ಯದ ನೆಲೆ

ಬಾಂಧವ್ಯದ ನೆಲೆ
***************

ನಂಬಿಕೆಗಳ ನೆಲೆಗಟ್ಟಿನ ಮೇಲೆಯೇ
ನಿಂತಿಹುದು ಬಾಂಧವ್ಯ
ಸಂದೇಹ ಅಪನಂಬಿಕೆಗಳಡಿಯಲ್ಲಿ. 
ಒಡೆಯುವುದು ಸಂಭಾವ್ಯ

ಸ್ನೇಹ ಪ್ರೀತಿ ವಿಶ್ವಾಸಗಳ
ಒಡಲಲ್ಲಿಹುದು ಬಾಂಧವ್ಯ
ನಿರೀಕ್ಷೆ ಪ್ರತೀಕ್ಷೆಗಳ ಪ್ರಖರ
ಜ್ವಾಲೆ ದಹಿಸುವುದು ಸಂಭಾವ್ಯ

ಕಾಳಜಿ ಒಲುಮೆ ಬಲುಮೆಗಳ
ಅಪ್ಪಿ ಸುಖಿಸುವುದು ಬಾಂಧವ್ಯ
ಅಪಮಾನ ಆತಂಕಾಸೂಯೆಗಳು
ಕೊಚ್ಚಿ ಕೆಡವುವುದು ಸಂಭಾವ್ಯ

ಭದ್ರತೆ ಮಮತಾವಾತ್ಸಲ್ಯಗಳ 
ನೆರಳಲ್ಲರಳುವುದು ಬಾಂಧವ್ಯ
ದ್ವೇಷಾಸೂಯೆ ಅಭದ್ರತೆಯ
ಕರಿನೆರಳು ಕಬಳಿಸುವುದು ಸoಭಾವ್ಯ

ಮುದವೀವ ನುಡಿಗಟ್ಟು ಸಿರಿಸ್ನೇಹ
ಅದರಲಿಟ್ಟು ನಗಿಸುವುದು ಬಾಂಧವ್ಯ
ಇಲ್ಲಸಲ್ಲದ ವಿಚಾರಗಳ ಭೂತ
ಸಂಭ್ರಮವ ನುಂಗುವುದು ಸಂಭಾವ್ಯ

ಬಾಂಧವ್ಯಗಳು ಬೆಸೆದು ಬಣ್ಣಗಳು
ಮೇಳೈಸಿ ಬದುಕು ರಂಗಾಗಲಿ
ಆತಂಕ ಬದಿಗಿಟ್ಟು ನಗುವೇ ಒಳಗುಟ್ಟು
ಬಾಳು ಬೆಳದಿಂಗಳಾಗಲಿ..

            ಶೈಲೂ.......

Comments

Popular posts from this blog

343 ಒಗಟಿನ ರೂಪದ.ಚುಟುಕು

ಕವನ ಸಂಗ್ರಹ

ಕವನ