221 #ಹೀಗೊಂದು #ನೆನಪು

#ಹೀಗೊಂದು #ನೆನಪು
*****************

ಒಂಟಿಯಾಗಿದ್ದಾಗಲೇ
ನಂಟು ಬೆಳೆಸಲು ಹಾತೊರೆವ
ಗತಕಾಲದ ನೆನಪುಗಳ ಹಾವಳಿ
ಕಳೆದುಕೊಂಡವುಗಳ
ಗಳಿಸಿಕೊಂಡವುಗಳ
ತೊರೆದುಹೋದವುಗಳ
ಬೆನ್ನಿಗಂಟಿದ ಬೇತಾಳಗಳ
ನೆನಪಿನ ಪ್ರಭಾವಳಿ..!
ಒಂದೇತಾಯೊಡಲ ಅಮೃತವ
ಕುಡಿದು ಬೆಳೆದ ಸೋದರ ಸಂಭಂದ
ಸ್ವಾರ್ಥ ಲಾಲಸೆಯ 
ಕರಾಳ ಮುಖದ ಸೋಲು -
ಗೆಲುವಿನ ಹೆಜ್ಜೆಗುರುತುಗಳ ತರಂಗ
ಮನದ ತಿಳಿಗೊಳವ ಮಲಿನತೆಯ ಮಾಡಿ
ರಾಡಿಯೆಬ್ಬಿಸಿದ ಬೇಡದ ವಿಚಾರ..!
ಪರಿಚಯವೇ ಇಲ್ಲದೆ
ಜೊತೆಯಾದ ಸ್ನೇಹಸಂಬಂದ
ಭಾವೋತ್ಕರ್ಷವ ಮೀರಿ
ಬೆಳೆದ ಪ್ರೇಮಾನುಬಂಧ
ಹೆಜ್ಜೆ ಹೆಜ್ಜೆಗೂ ಹರಸಿ ಹಾರೈಸಿ
ಪ್ರೋತ್ಸಾಹಿಸಿ ಹುರಿದುಂಬಿಸುವ
ಸಂತಸದ ವಿಚಾರ..!
ಈ ಒಳಿತು ಕೆಡಕುಗಳ
ಕಲಸುಮೇಲೋಗರದ
ನೆನಪಿನ ತರಂಗಗಳ
ಹೊಯ್ದಾಟ ಮನದಲಿ
ಒಮ್ಮೆ ಕಣ್ಣ oಚಲಿ ನೀರು
ಮತ್ತೊಮ್ಮೆ ಧೀರ್ಘ ನಿಟ್ಟುಸಿರು
ಹಿಂದೆಯೇ ಭಾವೋತ್ಕರ್ಷದ
ಸಖೀಗೀತ ಮನದಲಿ..!

            ಶೈಲೂ.....
Shylaja Ramesh

Comments

Popular posts from this blog

341, ಜಾನಪದ ಶೈಲಿ ಕವನ

278 ನಮೋ_ಸಂತ_ಯಮನೂರೇಶ

ಕವನ ಸಂಗ್ರಹ