218 ನಗುವ ಮನಸಿಗೆ ಏಕೋಇರುಳ ಕತ್ತಲ ಭಾವ

ನಗುವ  ಮನಸಿಗೆ  ಏಕೋ
ಇರುಳ ಕತ್ತಲ  ಭಾವ
ಬೆಳೆವ .ಆಸೆಗೆ  ಏಕೋ
ಬುಡವೇ ಕಡಿದಾ ಭಾವ
ಮನದ  ಗುನುಗುವಿಕೆಗೆ
ಸ್ವರವೇ  ಉಡುಗಿದ ಭಾವ
ಸುಖದ  ಸಂಸಾರಕೆ  ಏಕೋ
ಬರಸಿಡಿಲು  ಬಂದೆರಗಿದಾ ಭಾವ
ಆಸೆ ಕಂಗಳಿಗೆಕೋ
ಕತ್ತ್ಟಲಾವರಿಸಿದಾ   ಭಾವ
ದೃಢವಾದ .ಹೆಜ್ಜೆಗೆ  ಏಕೋ
ಭೂಮಿ ಬಿರಿದಾ ಭಾವ
ಸುರಿದ  ಮುತ್ತದು  ನೆನೆದು
ಭಾವ  ಉಕ್ಕಿದಾ ಭಾವ
ಬಿಸಿಯಪ್ಪುಗೆಯ  ನೆನೆದು
ದೇಹ ಹಸಿದಾ  ಭಾವ
ಸವಿದ  ತುತ್ತನು ನೆನೆದು
ಹೊಟ್ಟೆಯೂ  ಹಸಿದಾ  ಭಾವ
ಬದುಕು  ಸವೆಸಲು  ಬೇಕು
ನಿನ್ನ  ಪ್ರೀತಿಯಾ ಭಾವ

           ಆದರೆ

ಬಂತೇಕಿಂದು  ನಿನ್ನ  ಪ್ರೀತಿಗೆ  ಅಭಾವ.  ????

                                           .........ಶೈಲೂ........

Comments

Popular posts from this blog

278 ನಮೋ_ಸಂತ_ಯಮನೂರೇಶ

341, ಜಾನಪದ ಶೈಲಿ ಕವನ

ನನ್ನ ಕವನಗಳು